ಮಂತ್ರಾಲಯದಲ್ಲಿ ಭಾರೀ ಮಳೆ, ಮಠದ ಪ್ರಾಂಗಣದಲ್ಲೇ ರಾತ್ರಿ ಕಳೆದ ಭಕ್ತರು!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌: 

ಮಂತ್ರಾಲಯದಲ್ಲಿ ಬೆಳಗಿನ ಜಾವ 2 ಗಂಟೆಯಿಂದ ಜೋರು ಮಳೆ ಸುರಿದಿದ್ದು, ರಾತ್ರಿ ಮಠದ ಅಂಗಳದಲ್ಲೇ ಮಲಗಿದ್ದ ನೂರಾರು ಭಕ್ತರು ಮಳೆಯಿಂದಾಗಿ ಪರದಾಡಿದ್ದಾರೆ.

ಗುರು ರಾಘವೇಂದ್ರ ಸ್ವಾಮಿಗಳ 35ನೇ ಆರಾಧನಾ ಮಹೋತ್ಸವ ಹಿನ್ನೆಲೆ ರಾಜ್ಯದ ಮೂಲೆಗಳಿಂದ ಭಕ್ತರು ಮಠಕ್ಕೆ ಆಗಮಿಸಿದ್ದಾರೆ. ಬೆಳಗಿನ ಜಾವದ ಮಳೆಯಿಂದಾಗಿ ಮಲಗಲು ಜಾಗವಿಲ್ಲದೇ ಪರದಾಡಬೇಕಾಯಿತು.

ಕೊನೆಗೆ ಭಕ್ತರ ಬಳಿಗೆ ಆಗಮಿಸಿದ ಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥ ಸ್ವಾಮಿ ಪರ್ಯಾಯ ವ್ಯವಸ್ಥೆ ಮಾಡಿಸಿದ್ದಾರೆ. ಮಠದ ಪ್ರಾಕಾರ, ಪ್ರವಚನ ಮಂಟಪದಲ್ಲಿ ಭಕ್ತರಿಗೆ ಮಲಗಲು ಮಠದ ಸಿಬ್ಬಂದಿ ಅನುವು ಮಾಡಿಕೊಟ್ಟಿದ್ದಾರೆ.

ಇಂದು ರಾಯರ ಪೂರ್ವಾರಾಧನೆ ಹಿನ್ನೆಲೆ ಹೆಚ್ಚು ಸಂಖ್ಯೆಯಲ್ಲಿ ರಾತ್ರಿಯೇ ಆಗಮಿಸಿದ ಭಕ್ತರು ಮಠದ ಆವರಣದಲ್ಲಿ ಮಲಗಿದ್ದರು. ಆದರೆ ಬೆಳಗಿನ ಜಾವ ಎರಡು ಗಂಟೆ ಸುಮಾರಿಗೆ ಸುರಿದ ಭಾರೀ ಮಳೆ ಭಕ್ತರಿಗೆ ಅನಾನುಕೂಲ ತಂದಿಟ್ಟಿತು.

- Advertisement - Skool Shine Skool Shine

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!