ಹೊಸದಿಗಂತ ವರದಿ, ಮುಂಡಗೋಡ:
ಶನಿವಾರ ಸಾಯಂಕಾಲದಿಂದ ಆರಂಭವಾದ ದಿಢೀರ್ ಬಂದ ಗುಡುಗು ಮಿಂಚು ಸಹಿತ ಸುರಿದ ಮಳೆಗೆ ಪಟ್ಟಣದ ಬಂಕಾಪೂರ ರಸ್ತೆ ಮತ್ತೆ ಜಲಾವೃತವಾಗಿದೆ. ವಾಹನ ಸಂಚಾರಕ್ಕೆ ಅಡಚಣೆಯಾಗಿ ವಾಹನ ಸವಾರರು ಚರಂಡಿಯಿಂದ ರಸ್ತೆಯ ಮೇಲೆ ಬಂದ ನೀರಿನಲ್ಲೆ ಓಡಾಡಬೇಕಾಗಿದೆ.
ನಿರಂತರವಾಗಿ ಮಧ್ತಾಹ್ನದಿಂದ ನಿರಂತರವಾಗಿ ಸುರಿಯುತ್ತಿದ್ದ ಮಳೆಗೆ ಬಂಕಾಪೂರ ರಸ್ತೆಯಲ್ಲಿ ಚರಂಡಿಯಲ್ಲಿ ಹರಿಯಬೇಕಾದ ನೀರು ರಸ್ತೆಯ ಮೇಲೆ ಹರಿಯುತ್ತಿದೆ. ಇದರಿಂದ ಸಾರ್ವಜನಿಕರು ಕೂಡ ಚರಂಡಿ ನೀರಲ್ಲಿ ಮೈಮೇಲಿದ್ದ ಬಟ್ಟೆಗಳನ್ನು ಒದ್ದೆಮಾಡಿಕೊಂಡು ಓಡಾಡುತ್ತಿದ್ದಾರೆ.
ಸಾರ್ವಜನಿಕರು ಹಾಗೂ ವಾಹನ ಸವಾರರು ಮಳೆರಾಯನ ಅಬ್ಬರಕ್ಕೆ ಮೈ ಒದ್ದೆಮಾಡಿಕೊಂಡು ಓಡಾಡುವಂತಾಯಿತು. ಒಟ್ಟಾರೆ ಬಂಕಾಪೂರ ರಸ್ತೆಯಲ್ಲಿ ಹಲವು ವರ್ಷಗಳಿಂದ ಸಮರ್ಪಕ ಚರಂಡಿ ನಿರ್ಮಾಣ ಮಾಡದೆ ಜನರು ಕಷ್ಟಪಟ್ಟಿದ್ದರು ಆದರೆ ನೂತನವಾಗಿ ಕೊಟ್ಯಾಂತರ ರೂಪಾಯಿ ಕರ್ಚು ಮಾಡಿ ಒಂದು ತಿಂಗಳು ಕಳೆದಿಲ್ಲ ಆದರು ಮಳೆಯ ನೀರು ಸರಿಯಾಗಿ ಚರಂಡಿಯಲ್ಲಿ ಹರಿಯದೆ ರಸ್ತೆಯ ಮೇಲೆ ನಿಲ್ಲುತ್ತಿದ್ದು ಇದರಿಂದ ಸ್ಥಳಿಯರು ಮತ್ತೆ ಪಟ್ಟಣ ಪಂಚಾಯತಿಗೆ ಹಿಡಿಶಾಪ ಹಾಕುತ್ತಿರುವುದು ಕಂಡು ಬಂದಿತು.
ಇಷ್ಟು ವ್ಷಗಳಿಂದ ಚರಂಡಿಯ ನೀರು ರಸ್ತೆಗಳ ಮೇಲೆ ಹರಿಯುತ್ತಿದೆ. ಇಲ್ಲಿ ವಾಸಿಸುವ ಜನರ ಮನೆಗಳಿಗೆ ನೀರು ನುಗ್ಗುತ್ತದೆ ಪ್ರತಿ ವರ್ಷ ಹಾನಿಯಾಗುವುದನ್ನು ಇಲ್ಲಿನ ಅಧಿಕಾರಿಗಳಿಗೆ ರಾಜಕಾರಣಿಗಳಿಗೆ ತಿಳಿಯುತ್ತಿಲ್ಲಾ ಇದೆ ರೀತಿ ಅವರುಗಳ ಮನೆ ಮುಂದೆ ನೀರು ನಿಂತು ಮನೆಗೆ ನುಗ್ಗಿದರೆ ತಿಳಿಯುತ್ತಿತ್ತು ಜನರ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳದ ಅಧಿಕಾರಿಗಳು ವಾರ್ಡ ಸದಸ್ಯರು ಇದ್ದು ಇಲ್ಲದೆ ಎನಿಸಿದೆ.
ಕಳೆದ ಬಾರಿ ಮಳೆಗಸಲದಲ್ಲೆ ಭೇಟಿ ನೀಡಿದ ಜಿಲ್ಲಾಧಿಕಾರಿಗಳು ಎರಡು ಮೂರು ದಿನದಲ್ಲಿ ಸಮಸ್ಯೆಯನ್ನು ಬಗೆ ಹರಿಸುವುದಾಗಿ ಸುಳ್ಳು ಭರವಸೆ ನೀಡಿ ಹೋಗಿದ್ದರು ಈಗ ಎನು ಮಾಡಿದಂಗಾಯ್ತು ನೂತನವಾಗಿ ನಿರ್ಮಾಣ ಮಾಡಿದ ಚರಂಡಿಯಲ್ಲಿ ನೀರು ಹರಿಯದೆ ರಸ್ತೆ ಮೇಲೆ ಹರಿಯುತ್ತಿದೆ. ಸರಿಯಾಗಿ ನೀರು ಹರಿಯುವಂತೆ ಇಂಜಿನಿಯರಗಳ ರೂಪರೇಷ ಮಾಡಿಕೊಂಡು ಮಾಡಬೇಕಾದ ಕಾಮಗಾರಿ ಗುತ್ತಿಗೆದಾರರ ಅಧಿಕಾರಿಗಳ ಜೇಬು ತುಂಬಿಸುವಂತೆ ಮಾಡಲಾಗಿದೆ ಎಂದು ಪ್ರಕಾಶ ಮುಚ್ಚಂಡಿ, ಗಜಾನನ ಮುಳಗೇಕರ, ದೀಪಕ್ ರಾಘವೇಂದ್ರ ಸೇರಿದಂತೆ ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು.
ಮಳೆಗಾಲ ಆರಂಭವಾಗುವ ಮುನ್ನವೆ ಮುಂಜಾಗ್ರತಾಕ್ರಮಾವಾಗಿ ಚರಮನಡಿಯಲ್ಲಿನ ಹುಳು ತೆಗೆಯಬೇಕಾದ ಪಟ್ಟಣ ಪಂಚಾಯತ ತೆಗೆಯದೆ ಇರುವುದು ಸಾರ್ವಜನಿಕರು ಸಂಕಷ್ಟಕ್ಕೆ ಬಿಳುವಂತಾಗಿದೆ ಇನ್ನಾದರು ಅಧಿಕಾರಿಗಲಕುಬೆಚ್ಚೆತ್ತು ಕೊಳ್ಳುವರೆ ಕಾದು ನೋಡಬೇಕಾಗಿದೆ.