March 22, 2026
Sunday, March 22, 2026
spot_img

ಕೊಡಗಿನ ನಾಪೋಕ್ಲುದಲ್ಲಿ ಭಾರೀ ಮಳೆ: ಕಾಫಿ ಬೆಳೆಗಾರರು ಖುಷ್

ಹೊಸದಿಗಂತ ವರದಿ, ಮಡಿಕೇರಿ:

ಕೊಡಗು ಜಿಲ್ಲೆಯ ಹಲವೆಡೆ ಮಳೆಯಾಗಿದೆ.ಬುಧವಾರ ಬೆಳಗಿನ ಜಾವ ಜಿಲ್ಲೆಯ ಕೆಲವು ಭಾಗಗಳಲ್ಲಿ ಹಗುರದಿಂದ‌ ಸಾಧಾರಣ ಮಳೆಯಾಗಿದ್ದರೆ, ಮಧ್ಯಾಹ್ನದ ವೇಳೆಗೆ ಕುಶಾಲನಗರ ತಾಲೂಕಿನ ಹಲವೆಡೆ ಸಾಧಾರಣ ಮಳೆ‌ ಬಿದ್ದಿದೆ.ನಾಪೋಕ್ಲು ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮದಲ್ಲಿ ಉತ್ತಮ ಮಳೆಯಾಗಿದೆ.

ನಾಪೋಕ್ಲು ಪಟ್ಟಣ ಹಾಗೂ ಸುತ್ತಮುತ್ತಲ ಗ್ರಾಮಗಳು ಸೇರಿದಂತೆ ಬಲ್ಲಮಾವಟಿ ಗ್ರಾಮಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಲ್ಲಿ ಬುಧವಾರ ಉತ್ತಮ ಮಳೆ ಸುರಿಯಿತು.

ನೆಲಜಿ, ಬಲ್ಲಮಾವಟಿ, ಪೇರೂರು ,ದೊಡ್ಡಪುಲಿಕೋಟು, ಅಯ್ಯಂಗೇರಿ ಗ್ರಾಮಗಳಲ್ಲಿ ಗುಡುಗು ಸಹಿತ ಮಳೆಯಾಯಿತು .

ಬಲ್ಲಮಾವಟಿ ಗ್ರಾಮದ ಪ್ರೌಢಶಾಲೆಯ ಕ್ರೀಡಾಂಗಣದಲ್ಲಿ ಮಳೆಯಿಂದಾಗಿ ನೀರು ತುಂಬಿ ಹರಿಯಿತು.ಬುಧವಾರ ಸುರಿದ ಬಿರುಸಿನ ಮಳೆಯಿಂದ ಕಾಫಿಬೆಳೆಗಾರರು ಸಂತಸಪಟ್ಟರು. ಬಿರುಸಿನ ಮಳೆ ಕಾಫಿ ಹೂವರಳಲು ಸಹಕಾರಿಯಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !