ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಿಸಿಲ ಬೇಗೆಯಿಂದ ತತ್ತರಿಸಿ ಹೋಗಿದ್ದ ಕರಾವಳಿಯಲ್ಲಿ ಇಂದು ಗುಡುಗು, ಗಾಳಿ ಸಹಿತ ಮಳೆ ಸುರಿದಿದೆ.
ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಸುಳ್ಯ ನಗರ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸುಮಾರು ಅರ್ಧ ಮುಕ್ಕಾಲು ಗಂಟೆ ಮಳೆಯಾಗಿದೆ. ಇದೀಗ ಆರಂಭಗೊಂಡ ಮಳೆ ಇನ್ನೂ ಒಂದೆರಡು ದಿನ ಸುರಿದರೆ ಮಾತ್ರ ಈ ನದಿಯಲ್ಲಿ ನೀರು ಕಾಣಬಹುದು ಎಂದು ಜನರು ಅಪೇಕ್ಷಿಸಿದ್ದಾರೆ.