October 18, 2026
Sunday, October 18, 2026
spot_img

ಮಹಾಮಳೆಗೆ ನಲುಗಿದ ಮುಂಬೈ: ನಾಲ್ಕು ಅಂತಸ್ತಿನ ಕಟ್ಟಡ ಕುಸಿದು 6 ಸಾವು, ರೆಡ್ ಅಲರ್ಟ್ ಘೋಷಣೆ

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಾಣಿಜ್ಯ ನಗರಿ ಮುಂಬೈನಲ್ಲಿ ಭಾನುವಾರ ರಾತ್ರಿಯಿಂದ ಆರಂಭವಾದ ಮಹಾಮಳೆಗೆ ಇಡೀ ಜಗತ್ತೇ ಸ್ತಬ್ಧಗೊಂಡಿದೆ. ಜಲಪ್ರಳಯದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ಪ್ರತ್ಯೇಕ ಅವಘಡಗಳಲ್ಲಿ ಒಟ್ಟು ಏಳು ಮಂದಿ ದುರಂತ ಅಂತ್ಯ ಕಂಡಿದ್ದಾರೆ.

ಮಂಖುರ್ಡ್‌ನಲ್ಲಿ ಕಟ್ಟಡ ಧರಾಶಾಹಿ: 6 ಸಾವು

ಮಂಖುರ್ಡ್‌ನ ಜನತಾ ನಗರದಲ್ಲಿ ಭಾನುವಾರ ರಾತ್ರಿ 8:30ರ ಸುಮಾರಿಗೆ ನಾಲ್ಕು ಅಂತಸ್ತಿನ ಚಾಲ್ ಕಟ್ಟಡವೊಂದು ಹಠಾತ್ ಕುಸಿದು ಬಿದ್ದಿದೆ. ಕಟ್ಟಡದ ಅವಶೇಷಗಳಡಿ ಸಿಲುಕಿದ್ದವರನ್ನು ರಕ್ಷಿಸಲು ಅಗ್ನಿಶಾಮಕ ದಳ, ಪೊಲೀಸ್ ಹಾಗೂ ಬಿಎಂಸಿ ಸಿಬ್ಬಂದಿ ತಕ್ಷಣವೇ ಧಾವಿಸಿ ಜಂಟಿ ಕಾರ್ಯಾಚರಣೆ ನಡೆಸಿದರು. ಆದಾಗ್ಯೂ, ಚಿಕಿತ್ಸೆ ಫಲಿಸದೇ ಆರು ಮಂದಿ ಮೃತಪಟ್ಟಿದ್ದಾರೆ.

ಮುರುಳಿಬಿದ್ದ ಮರಗಳು: ವೃದ್ಧ ಬಲಿ

ನಗರದಾದ್ಯಂತ ಬೀಸಿದ ಭಾರಿ ಗಾಳಿಗೆ ನೂರಾರು ಮರಗಳು ನೆಲಕ್ಕುರುಳಿವೆ. ಕುರ್ಲಾ ಭಾಗದಲ್ಲಿ ಅಂಗಡಿಯೊಂದರ ಮೇಲೆ ಮರ ಬಿದ್ದ ಪರಿಣಾಮ 63 ವರ್ಷದ ವೃದ್ಧರೊಬ್ಬರು ಜೀವ ಕಳೆದುಕೊಂಡಿದ್ದಾರೆ. ಬಾಂದ್ರಾ ಮತ್ತು ವರ್ಲಿ ಭಾಗಗಳಲ್ಲೂ ರಸ್ತೆಗಳ ಮೇಲೆ ಮರಗಳು ಉರುಳಿ ವಾಹನಗಳು ಜಖಂಗೊಂಡಿವೆ.

ವಿಮಾನ ಯಾನ ಸ್ಥಗಿತ, ಶಾಲಾ-ಕಾಲೇಜು ಬಂದ್

ಧಾರಾಕಾರ ಮಳೆ ಹಾಗೂ ಮಂದ ಬೆಳಕಿನ ಕಾರಣದಿಂದಾಗಿ ಮುಂಬೈ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು ಒಂದು ಗಂಟೆ ಕಾಲ ವಿಮಾನಗಳ ಹಾರಾಟವನ್ನು ಸಂಪೂರ್ಣವಾಗಿ ಸ್ಥಗಿತಗೊಳಿಸಲಾಗಿತ್ತು. ಹವಾಮಾನ ಇಲಾಖೆಯ ತೀವ್ರ ಮುನ್ನೆಚ್ಚರಿಕೆ ಹಿನ್ನೆಲೆಯಲ್ಲಿ ಮುಂಬೈ, ಥಾಣೆ, ಪಾಲ್ಘಢ್ ಮತ್ತು ಪುಣೆ ಜಿಲ್ಲೆಗಳ ಶಾಲಾ-ಕಾಲೇಜುಗಳಿಗೆ ಇಂದು ತುರ್ತು ರಜೆ ಘೋಷಿಸಲಾಗಿದೆ.

Must Read