ಹೊಸದಿಗಂತ ವರದಿ ಹುಬ್ಬಳ್ಳಿ:
ನಗರದಲ್ಲಿ ಭಾನುವಾರ ಸಂಜೆ ಧಾರಾಕಾರ ಮಳೆ ಸುರಿದ್ದು, ರಸ್ತೆಯಲ್ಲಿ ಹೋಗುತ್ತಿದ್ದ ಕಾರ್‌ವೊಂದು ನೀರಿನ ರಬಸಕ್ಕೆ ಕೊಚ್ಚಿ ಹಳ್ಳಕ್ಕೆ ಉರುಳಿದ ಘಟನೆ ಗಬ್ಬೂರ ವೃತ್ತದಲ್ಲಿ ತಡ ರಾತ್ರಿ ನಡೆದಿದೆ.
ಹಾನಗಲ್ ನಿವಾಸಿಗಳು ಹುಬ್ಬಳ್ಳಿ ಚಿಕಿತ್ಸೆ ಪಟೆಯಲು ಬಂದಿದ್ದರು. ಚಿಕಿತ್ಸೆ ಪಡೆದು ಮರಳಿ ಮನೆಗೆ ಹೋಗುವಾಗ ಜೋರಾಗಿ ಮಳೆ ಸುರಿದಿದೆ. ಗಬ್ಬೂರ ವೃತ್ತದ ಬಳಿ ಇರುವ ಹಳ್ಳದ ಹತ್ತಿರ ರಸ್ತೆ ದಾಟುವಾಗ ನೀರಿನ ರಬಸಕ್ಕೆ ಕಾರು ಹಳ್ಳದಲ್ಲಿ ಕೊಚ್ಚಿ ಹೋಗಿದೆ.
ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಕಸಬಾಪೇಟ ಪೊಲೀಸ್ ಠಾಣೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕಾರು ನೀರಿನಲ್ಲಿ ಕೊಚ್ಚಿ ಹೋಗುವಾಗ ಕಾರಿನಲ್ಲಿದ್ದವರು ಕೆಳಗೆ ಇಳಿದಿದ್ದಾರೆ. ಇದರಿಂದ ಅದೃಷ್ಟವಶಾತ್ ಪ್ರಾಣಾಪಾಯ ಆಗಿಲ್ಲ ಎಂದು ಕಸಬಾಪೇಟ ಪೊಲೀಸ್ ತಿಳಿಸಿದ್ದಾರೆ. ಕಾರು ಹೊರ ತೆಗೆಯಲು ನಮ್ಮ ಸಿಬ್ಬಂದಿ ಕಾರ್ಯ ನಿರತರಾಗಿದ್ದಾರೆ ಎಂದು ತಿಳಿಸಿದರು.