ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾನುವಾರ ಸಂಜೆ ವೇಳೆಗೆ ದಕ್ಷಿಣ ಕನ್ನಡ ಜಿಲ್ಲೆಯ ಹೊರವಲಯದ ಸುಬ್ರಹ್ಮಣ್ಯ ಪರಿಸರದಲ್ಲಿ ಬಾರೀ ಮಳೆಗೆ ಸುರಿಡಿದ್ದು, ಇದರ ಪರಿಣಾಮ ಕೈಕಂಬದ ಕೋಟೆಸಾರು ಹೊಳೆಗೆ ನಿರ್ಮಿಸಿದ ಸೇತುವೆಯು ಮುಳುಗಡೆಗೊಂಡಿತು.
ಸಂಜೆ ವೇಳೆಗೆ ಗುಡುಗು ಮಿಂಚಿನ ಜೊತೆ ಸುರಿದ ಭಾರೀ ಮಳೆಗೆ ಕೇವಲ ಅರ್ಧ ತಾಸುಗಳ ಮಳೆಗೆ ಕೈಕಂಬದ ಬಳಿ ಹರಿಯುವ ಕೋಟೆಸಾರು ಹೊಳೆಯುವ ತುಂಬಿ ಹರಿಯಿತು.ಇದರಿಂದಾಗಿ ಸುಬ್ರಹ್ಮಣ್ಯ-ಉಪ್ಪಿನಂಗಡಿ-ಮಂಗಳೂರು ರಸ್ತೆಗೆ ನಿರ್ಮಿತವಾದ ಕೋಟೆಸಾರು ಸೇತುವೆಯು ಮುಳುಗಡೆಗೊಂಡಿತು.ಇದರಿಂದಾಗಿ ರಸ್ತೆ ಸಂಚಾರ ಬಂದ್ ಆಯಿತು..ಮಳೆ ಕಡಿಮೆಯಾದ ಬಳಿಕ ಪ್ರವಾಹವೂ ಕಡಿಮೆಯಾಗಿ ಸಂಚಾರ ಸುಗಮಗೊಂಡಿತು.
ಸುಬ್ರಹ್ಮಣ್ಯ, ನೆಟ್ಟಣ, ಬಿಳಿನೆಲೆ, ಕೈಕಂಬ, ಕುಲ್ಕುಂದ, ಐನೆಕಿದು, ಹರಿಹರ,ಕೊಲ್ಲಮೊಗ್ರು, ಬಾಳುಗೋಡು,ಗುತ್ತಿಗಾರು, ಪಂಜ,ಯೇನೆಕಲ್ಲು, ಬಳ್ಪ, ಬೀದಿಗುಡ್ಡೆ, ಕರಿಕ್ಕಳ,ನಿಂತಿಕಲ್ಲು ಪ್ರದೇಶದಲ್ಲಿ ಮಳೆ ಸುರಿಯಿತು.