ಹೊಸದಿಗಂತ ವರದಿ ಹೊನ್ನಾವರ :
ಕಳೆದೆರಡು ದಿನಗಳಿಂದ ಉತ್ತರ ಕನ್ನಡ ಜಿಲ್ಲೆಯಲ್ಲಿ ವ್ಯಾಪಕ ಮಳೆ ಬೀಳುತ್ತಿದ್ದು ಜನಜೀವನ ಸಂಪೂರ್ಣ ಭಾದಿತವಾಗಿದೆ.
ಮಳೆಯಬ್ಬರಕ್ಕೆ ಹೊನ್ನಾವರ ತಾಲೂಕಿನ ಗುಂಡ ಬಾಳ ನದಿಗೆ ನೆರೆ ಬಂದಿದ್ದು ಚಿಕ್ಕನಕೋಡ್ ಗ್ರಾಮ ಪಂಚಾಯತಿ ವ್ಯಾಪ್ತಿಯ ಹರಿಜನಕೇರಿ ಮತ್ತು ಹಿತ್ತಲಕೇರಿ ಮಜೇರಿಯ ಮನೆಗಳಿಗೆ ನೀರು ನುಗ್ಗಿದೆ. ಈ ಮನೆಗಳ ಜನರನ್ನು, ಜಿಲ್ಲಾಡಳಿತದ ವತಿಯಿಂದ ತೆರೆಯಲಾದ ಕಾಳಜಿ ಕೇಂದ್ರಕ್ಕೆ ಕರೆತಂದು ಅಗತ್ಯ ವ್ಯವಸ್ಥೆಗಳನ್ನು ಒದಗಿಸಲಾಗಿದೆ.
ಗುಂಡಬಾಳ ನದಿಯ ನೆರೆ ನೀರಿನ ಪ್ರಮಾಣ ಹೆಚ್ಚಾಗುತ್ತಿದ್ದು ಈ ಭಾಗದ ಜನತಾ ವಿದ್ಯಾಲಯ ಅನಿಲಗೋಡ್ ,ಹಿರಿಯ ಪ್ರಾಥಮಿಕ ಶಾಲೆ ಅನಿಲಗೋಡ,ಗುಂಡ ಬಾಳ ನಂ-2,ಗುಂಡಿ ಬೈಲ್ ನಂ 2, ಹುಡ್ಗೋಡ ಇಟ್ಟಿಹಾದ ಪಬ್ಲಿಕ್ ಸ್ಕೂಲ್ ವಲ್ಕಿ, ಕಿರಿಯ ಪ್ರಾಥಮಿಕ ಶಾಲೆ ಗಂಜಿಗೆರೆ ಈ ಶಾಲೆಗಳಿಗೆ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ ತಿಳಿಸಿದ್ದಾರೆ.