ಜಮ್ಮು ಕಾಶ್ಮೀರದಲ್ಲಿ ಭಾರೀ ಹಿಮಪಾತ: ನಾಲ್ಕು ಜಿಲ್ಲೆಗಳಲ್ಲಿ ಹೈ ಅಲರ್ಟ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಜಮ್ಮು ಮತ್ತು ಕಾಶ್ಮೀರದ ನಾಲ್ಕು ಜಿಲ್ಲೆಗಳಲ್ಲಿ ಹಿಮಾಪಾತ ಸಂಭವಿಸಿದೆ ಪ್ರಮುಖ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಯಲ್ಲಿ ಭಾರಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ಹೀಗಾಗಿ ಎಚ್ಚರ ವಹಿಸುವಂತೆ ಸ್ಥಳೀಯ ಜಿಲ್ಲಾಡಳಿತ ಸೂಚನೆ ನೀಡಿದೆ.

ಸೋನ್ಮಾರ್ಗ್ ಬಳಿ ಇರುವ ಪರ್ವತದ ಮೇಲಿನ ಹಿಮಗಳು ಏಕಾಏಕಿ ಕರಗುತ್ತಿದೆ. ತೀವ್ರ ತಾಪಮಾನದ ಪರಿಣಾಮ ಹಿಮಗಳು ಕರಗಳು ಆರಂಭಿಸಿದೆ. ಸೋನ್ಮಾರ್ಗ್ ರಸ್ತೆಗಳು ಸಂಪೂರ್ಣ ಬಂದ್ ಆಗಿದೆ. ವಾಹನಗಳು ಜಖಂಗೊಂಡಿದೆ. ಇದೇ ವೇಳೆ ದಾರಿಯಲ್ಲಿ ಸಾಗುತ್ತಿದ್ದ ಪ್ರಯಾಣಿಕರು ವಾಹನ ನಿಲ್ಲಿಸಿ ಓಡಿದ್ದಾರೆ. ಅದೃಷ್ಠವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಜಮ್ಮು ಮತ್ತು ಕಾಶ್ಮೀರದ ಕುಪ್ವಾರ, ಬಂಡಿಪೊರಾ, ಗಂಡೇರ್ಬಾಲ್ ಹಾಗೂ ಬಾರಾಮುಲ್ಲಾದ ನಾಲ್ಕು ಜಿಲ್ಲೆಗಳಲ್ಲಿ ಮುಂದಿನ 24 ಗಂಟೆ ಭಾರಿ ಪ್ರಮಾಣದಲ್ಲಿ ಹಿಮಪಾತ ಸಂಭವಿಸುವ ಸಾಧ್ಯತೆ ಇದೆ. ಇತ್ತ ಸ್ಥಳೀಯರು ಪರ್ವತ ಪ್ರದೇಶ, ಹಿಮಾಪತ ಹೆಚ್ಚಿರುವ ಎತ್ತರ ಪ್ರದೇಶಗಳತ್ತ ತೆರಳದಂತೆ ಸೂಚಿಸಲಾಗಿದೆ. ಈ ಮಾರ್ಗದಲ್ಲಿ ಪ್ರವಾಸಿಗರಿಗೂ ನಿರ್ಬಂಧ ಹೇರಲಾಗಿದೆ.

ಜಮ್ಮು ಮತ್ತು ಕಾಶ್ಮೀರದ ಕೆಲ ಭಾಗದಲ್ಲಿ ಮಂಜಿನ ಮಳೆಯಾಗುತ್ತಿದೆ. ಹೀಗಾಗಿ ಮತ್ತಷ್ಟು ಹಿಮಪಾತವಾಗುವ ಸಾಧ್ಯತೆಯನ್ನು ಅಧಿಕಾರಿಗಳು ಸೂಚಿಸಿದ್ದಾರೆ. ಯಾವುದೇ ಕ್ಷಣದಲ್ಲೂ ತುರ್ತ ಅಗತ್ಯಕ್ಕೆ 112 ಕರೆ ಮಾಡಲು ನಾಲ್ಕು ಜಿಲ್ಲೆಗಳ ಜನತೆಗೆ ಮನವಿ ಮಾಡಲಾಗಿದೆ. ರಕ್ಷಣಾ ಸಿಬ್ಬಂಧಿಗಳನ್ನು ನಿಯೋಜಿಸಲಾಗಿದೆ.

ಸದ್ಯ ಭಾರಿ ಪ್ರಮಾಣದಲ್ಲಿ ಹಿಮಪಾತವಾಗಿದ್ದರೂ ಸಾವು ನೋವು ಸಂಭವಿಸಿಲ್ಲ. ಆದರೆ ಮುಂದಿನ 24 ಗಂಟೆ ಕಾಲ ಹಿಮಾಪಾತ ಸಾಧ್ಯತೆಯನ್ನು ಸೂಚಿಸಲಾಗಿದೆ. ಹೀಗಾಗಿ ಎಚ್ಚರಿಕೆಯಿಂದಿರಲು ಸೂಚಿಸಲಾಗಿದೆ. ಜಮ್ಮು ಕಾಶ್ಮೀರದಲ್ಲಿ ಹಲವು ಭಾರಿ ಹಿಮಪಾತಕ್ಕೆ ಸಾವು ನೋವುಗಳು ಸಂಭವಿಸಿದೆ.

1978ರಲ್ಲಿ ಪುಲ್ವಾಮ ಜಿಲ್ಲೆಯಲ್ಲಿ ಸಂಭವಿಸಿದ ಹಿಮಪಾತ ಕಣಿವೆ ರಾಜ್ಯದ ಅತ್ಯಂತ ಭೀಕರ ಹಿಮಪಾತ ಎಂದು ಗುರುತಿಸಲಾಗಿದೆ. ಈ ಹಿಮಪಾತದಲ್ಲಿ 200 ಮಂದಿ ಮೃತಪಟ್ಟಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!