ಹೊಸದಿಗಂತ ಡಿಜಿಟಲ್ ಡೆಸ್ಕ್:
ಕನ್ನಡದ ‘ಹೆಬ್ಬುಲಿ’ ಸಿನಿಮಾದ ನಟಿ ಅಮಲಾ ಪೌಲ್ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ.
ಈ ಖುಷಿ ಸುದ್ದಿಯನ್ನು ನಟಿಯೇ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿ ಮಗುವಿನ ಹೆಸರನ್ನು ಕೂಡ ರಿವೀಲ್ ಮೀಡಿದ್ದಾರೆ.
‘ಜೂನ್ 11ರಂದು ಜನಿಸಿದ ಪವಾಡ’ ಎಂದು ನಟಿ ಅಡಿಬರಹ ನೀಡಿದ್ದು, ಗಂಡು ಮಗುವಿಗೆ ‘ಇಲೈ’ ಎಂದು ಹೆಸರಿಟ್ಟಿದ್ದಾರೆ.
ಕಳೆದ ವರ್ಷ ನವೆಂಬರ್ನಲ್ಲಿ ಕೊಚ್ಚಿಯಲ್ಲಿ ಉದ್ಯಮಿ ಜಗತ್ ದೇಸಾಯಿ ಜೊತೆ ಅಮಲಾ ಮದುವೆಯಾದರು. ಇತ್ತೀಚೆಗೆ ರಿಲೀಸ್ ಆದ ‘ಆಡುಜೀವಿತಂ’ ಸಿನಿಮಾದಲ್ಲಿ ನಾಯಕಿಯಾಗಿ ನಟಿಸಿದ್ದರು.