ಹೆಲಿಕಾಪ್ಟರ್ ದುರಂತ: ಚಿಲಿಯ ಮಾಜಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ ಸಾವು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಚಿಲಿಯ ಮಾಜಿ ಅಧ್ಯಕ್ಷ ಸೆಬಾಸ್ಟಿಯನ್ ಪಿನೆರಾ (74) ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ.
ದಕ್ಷಿಣ ಭಾಗದಲ್ಲಿ ಈ ಅವಘಡ ನಡೆದಿದ್ದು, ಘಟನೆಯನ್ನು ಅವರ ಕಚೇರಿ ಧೃಢಪಡಿಸಿದೆ.

ರಕ್ಷಣಾ ಪಡೆಗಳು ಪಿನೆರಾ ಅವರ ಮೃತದೇಹವನ್ನು ಪತ್ತೆಹಚ್ಚಿವೆ. ಪಿನೆರಾ ಸಾವಿನ ಹಿನ್ನೆಲೆಯಲ್ಲಿ ಸರ್ಕಾರವು ರಾಷ್ಟ್ರೀಯ ಶೋಕಾಚರಣೆಯನ್ನು ಘೋಷಿಸಲಿದೆ ಎಂದು ಚಿಲಿ ಆಂತರಿಕ ಸಚಿವ ಕ್ಯಾರೊಲಿನಾ ತೋಹಾ ಮಾಧ್ಯಮಗಳಿಗೆ ಹೇಳಿದ್ದಾರೆ.

ಅಪಘಾತಕ್ಕೀಡಾದ ಹೆಲಿಕಾಪ್ಟರ್‌ನಲ್ಲಿ ನಾಲ್ವರು ಪ್ರಯಾಣಿಸುತ್ತಿದ್ದರು. ಇತರ ಮೂವರು ಬದುಕುಳಿದಿದ್ದಾರೆ ಎಂದು ಸರ್ಕಾರದ ತುರ್ತು ಸಂಸ್ಥೆ ಸೆನಾಪ್ರೆಡ್ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!