ಹೊಸದಿಗಂತ ಡಿಜಿಟಲ್ ಡೆಸ್ಕ್:
ಶಾರುಖ್ ಖಾನ್ ಅಭಿನಯದ ಜವಾನ್ ಸಿನಿಮಾ ಹಿಟ್ ಆಗಿದೆ, ಸಿನಿಮಾ ರಿಲೀಸ್‌ಗೂ ಮುನ್ನವೇ ಜವಾನ್ ಪೋಸ್ಟರ್ ಸೂಪರ್ ಹಿಟ್ ಆಗಿತ್ತು.
ಇದೇ ಪೋಸ್ಟರ್ ಬಳಕೆ ಮಾಡಿಕೊಂಡು ಯುಪಿ ಪೊಲೀಸರು ಹೆಲ್ಮೆಟ್ ಜಾಗೃತಿಯನ್ನು ಮೂಡಿಸಿದ್ದಾರೆ. ಪೋಸ್ಟರ್‌ನಲ್ಲಿ ಶಾರುಖ್ ತಲೆಗೆ ಬ್ಯಾಂಡೇಡ್ ಹಾಕಿದೆ. ಹೆಲ್ಮೆಟ್ ಹಾಕದಿದ್ದರೆ ಈ ರೀತಿ ನಿಮ್ಮ ತಲೆಗೂ ಬ್ಯಾಂಡೇಡ್ ಹಾಕಬೇಕಾಗುತ್ತದೆ ಎಂದು ಹೇಳಿದ್ದಾರೆ.
ಸಣ್ಣವರಾಗಿರಲಿ, ಯುವಕರಾಗಿರಲಿ, ದೊಡ್ಡವರೇ ಆಗಿರಲಿ ಹೆಲ್ಮೆಟ್ ಎಲ್ಲರ ಜೀವ ಉಳಿಸುತ್ತದೆ ಎಂದು ಟ್ವೀಟ್ ಮೂಲಕ ಜಾಗೃತಿ ಮೂಡಿಸಿದ್ದಾರೆ.
जवान हो या बूढ़े,टू व्हीलर पर बैठने से पहले, हेलमेट कभी न भूलें।#Jawan#RoadSafety pic.twitter.com/tbCf83QlX5
— UP POLICE (@Uppolice) September 9, 2023