ಇ-ಖಾತಾ ಪರೀಕ್ಷೆಗೆ ಬಿಬಿಎಂಪಿಯಿಂದ ಹೆಲ್ಪ್‌ಡೆಸ್ಕ್‌ ಆರಂಭ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಬಿಬಿಎಂಪಿ 20 ಲಕ್ಷಕ್ಕೂ ಅಧಿಕ ಇ-ಖಾತಾಗಳನ್ನು ಡಿಜಿಟಲೀಕರಣ ಮಾಡಿದೆ. ಇ-ಖಾತಾ ಪರೀಕ್ಷೆಗೆ ಸಹಾಯವಾಣಿ ಬಿಡುಗಡೆ ಮಾಡಿದೆ.

20 ಲಕ್ಷಕ್ಕೂ ಅಧಿಕ ಖಾತೆಗಳನ್ನ ಇ-ಖಾತಾ ಮಾಡಿ ಬಿಬಿಎಂಪಿ ರೋಲ್ ಔಟ್ ಮಾಡಿದೆ. ಬೆಂಗಳೂರಿನ ಆಸ್ತಿದಾರರು ನಮ್ಮ ಖಾತೆ ಇ-ಖಾತಾ ಆಗಿದೆಯೇ ಅಥವಾ ಇಲ್ಲವೇ ಎಂಬ ಗೊಂದಲದಲ್ಲಿ ಇದ್ದಾರೆ. ಜೊತೆಗೆ ಇ-ಖಾತಾ ಮಾಡಿಸೋದು ಹೇಗೆ? ಸೈಟ್ ಮತ್ತು ಜಾಗ ಮಾರಾಟ ಮಾಡ್ತಾ ಇದ್ದರೆ, ಇ-ಖಾತಾ ಮಾಡಿಸೋದು ಹೇಗೆ ಎಂಬ ಗೊಂದಲ ಇದೆ.

ಬಿಬಿಎಂಪಿ ತನ್ನ ಎಂಟು ವಲಯಗಳಲ್ಲೂ ಇ-ಖಾತೆಗೆ ಸಂಬಂಧಿಸದಂತೆ ಗೊಂದಲ, ಸಮಸ್ಯೆಗಳನ್ನ ಬಗೆಹರಿಸಿಕೊಳ್ಳಲು ಹೆಲ್ಪ್ ಡೆಸ್ಕ್ ತೆರೆದಿದೆ. ನಾಗರಿಕರು ಸಹಾಯವಾಣಿಗಳಿಗೆ ಕರೆ ಮಾಡಿ ಇ-ಖಾತಾಗೆ ಸಂಬಂಧಿಸಿದಂತೆ ಇರುವ ಗೊಂದಲಗಳನ್ನ ನಿವಾರಣೆ ಮಾಡಿಕೊಳ್ಳಬಹುದಾಗಿದೆ.

ಬೊಮ್ಮನಹಳ್ಳಿ ವಲಯ – 9480683182, ದಾಸರಹಳ್ಳಿ ವಲಯ – 9480683710, ಮಹಾದೇವಪುರ ವಲಯ – 9480683720, ಪೂರ್ವ ವಲಯ – 9480683203, ಪಶ್ಚಿಮ ವಲಯ – 9480683204, ದಕ್ಷಿಣ ವಲಯ – 9480683179, ಆರ್.ಆರ್ ನಗರ ವಲಯ – 9480683645, ಯಲಹಂಕ ವಲಯ – 9480683516
- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!