ಹೊಸದಿಗಂತ ಡಿಜಿಟಲ್ ಡೆಸ್ಕ್:
ಬಾಲಿವುಡ್ನ ಹಿರಿಯ ನಟ ಧರ್ಮೇಂದ್ರ ನವೆಂಬರ್ 24 ರಂದು ನಿಧನರಾದರು. ಅದಕ್ಕೂ ಮೊದಲು ಅವರ ಸ್ಥಿತಿ ತುಂಬಾ ಗಂಭೀರವಾಗಿತ್ತು. ಆಸ್ಪತ್ರೆಯ ಹೊರಗೆ ಪಾಪರಾಜಿಗಳು ನಿರಂತರವಾಗಿ ಇದ್ದ ಕಾರಣ, ಡಿಯೋಲ್ ಕುಟುಂಬವು ಅಂತಿಮವಾಗಿ ಅವರ ಚಿಕಿತ್ಸೆಯನ್ನು ಮನೆಯಲ್ಲಿಯೇ ಮುಂದುವರಿಸಲು ನಿರ್ಧರಿಸಿತು. ಧರ್ಮೇಂದ್ರ ಅವರನ್ನು ಮನೆಗೆ ಕರೆತಂದ ನಂತರವೂ, ಪಾಪರಾಜಿಗಳು ಮನೆಯ ಹೊರಗೆ ನಿಲ್ಲುತ್ತಿದ್ದರು. ಇದರಿಂದ ಕಿರುಕುಳ ಉಂಟಾಗಿದೆ ಎಂದು ಹೇಮಾ ಮಾಲಿನಿ ಹೇಳಿದ್ದಾರೆ.
ಧರ್ಮೇಂದ್ರ ಅವರಿಗೆ ಅನಾರೋಗ್ಯ ಉಂಟಾಗಿತ್ತು. ಈ ವೇಳೆ ಆಸ್ಪತ್ರೆ ಹೊರಗೆ ಹಾಗೂ ಡಿಯೋಲ್ ಕುಟುಂಬದ ಹಿಂದೆ ಪಾಪರಾಜಿಗಳು ಇದ್ದರು. ಇದು ಸನ್ನಿ ಡಿಯೋಲ್ಗೆ ಕೋಪ ತರಿಸಿತ್ತು. ಅವರು ಕೂಗಾಡಿದ್ದರು ಎಂದು ಹೇಳಿದ್ದಾರೆ.
ಇದನ್ನೂ ಓದಿ: CINE | ರಾಕಿಂಗ್ ಸ್ಟಾರ್ ಬರ್ಥ್‌ಡೇಗೆ ಫ್ಯಾನ್ಸ್ ಸಜ್ಜು, ಎಲ್ಲೆಡೆ ಪೋಸ್ಟರ್ಸ್, ಬ್ಯಾನರ್ಸ್!
ಸನ್ನಿ ತುಂಬಾ ಅಸಮಾಧಾನಗೊಂಡಿದ್ದರು, ಏಕೆಂದರೆ ಆ ಸಮಯದಲ್ಲಿ ನಾವೆಲ್ಲರೂ ತುಂಬಾ ಭಾವನಾತ್ಮಕ ಹಂತದ ಮೂಲಕ ಸಾಗುತ್ತಿದ್ದೆವು. ಆ ಸ್ಥಿತಿಯಲ್ಲಿಯೂ ಸಹ, ಮಾಧ್ಯಮಗಳು ಮತ್ತು ಪಾಪರಾಜಿಗಳು ನಮ್ಮನ್ನು ಮತ್ತು ನಮ್ಮ ಕಾರುಗಳನ್ನು ನಿರಂತರವಾಗಿ ಹಿಂಬಾಲಿಸುತ್ತಿದ್ದರು. ಆ ಸಮಯದಲ್ಲಿ ನಮಗೆ ಸಾಕಷ್ಟು ಕಿರುಕುಳ ನೀಡಲಾಯಿತು. ನೆಮ್ಮದಿಯಿಂದ ಅತ್ತು ಹಗುರಾಗೋದಕ್ಕೂ ಬಿಡಲಿಲ್ಲ. ಈ ನೋವು ಸದಾ ನಮ್ಮನ್ನು ಕಾಡುತ್ತದೆ ಎಂದು ಹೇಳಿದ್ದಾರೆ.

