ಇನ್ಮುಂದೆ ವಿಧಾನಸೌಧಕ್ಕೆ ನೋ ಬಿಂದಾಸ್ ಎಂಟ್ರಿ: QR Code ಪಾಸ್‌ ವಿತರಣೆಗೆ ಇಲಾಖೆ ಸಜ್ಜು!

ಹೊಸದಿಗಂತ ಡಿಜಿಟಲ್ ಡೆಸ್ಕ್:

ವಿಧಾನಸೌಧ ಪ್ರವೇಶಕ್ಕೆ (Vidhana Soudha Entry) ಇನ್ನುಮುಂದೆ ಬೇಕಾಬಿಟ್ಟಿ ಪಾಸ್‌ಗಳನ್ನು ವಿತರಿಸುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ (Parameshwar) ಹೇಳಿದ್ದಾರೆ.

ವಿಧಾನಸೌಧ ದ್ವಾರದ ಮೆಟಲ್ ಡಿಟೆಕ್ಟರ್‌, ನೂತನ ಬ್ಯಾಗೇಜ್‌ಸ್ಕ್ಯಾನರ್‌ ಯಂತ್ರಗಳನ್ನು ಪರಮೇಶ್ವರ್‌ ಪರಿಶೀಲಿಸಿದರು. ವಿಧಾನಸೌಧ ಡಿಸಿಪಿ ನೇತೃತ್ವದಲ್ಲಿ ಭದ್ರತಾ ಕ್ರಮಗಳ ಪರಿಶೀಲನೆ ಹಾಗೂ ಮಾಹಿತಿಯನ್ನು ಪಡೆದರು.

ನಂತರ ಮಾತನಾಡಿದ ಅವರು, ವಿಧಾನಸೌಧಕ್ಕೆ ಬರಬೇಕು ಅಂದರೆ ಇನ್ನು ಮುಂದೆ ಕ್ಯೂ ಆರ್ ಕೋಡ್ (QR Code) ಇರುವ ಪಾಸ್‌ಗಳನ್ನು (Pass) ನೀಡಲಾಗುತ್ತದೆ. ವಿಧಾನಸೌಧದಲ್ಲಿ ಯಾರಾದರೂ ಮೆಟಲ್ ಸಾಧನ ತೆಗೆದುಕೊಂಡು ಹೋಗುತ್ತಿದ್ದರೆ ಈ ಬ್ಯಾಗೇಜ್ ಸ್ಕ್ಯಾನರ್‌ನಲ್ಲಿ ಪತ್ತೆಯಾಗುತ್ತದೆ. ಕಳೆದ 3 ವರ್ಷಗಳಿಂದ ಈ ಬ್ಯಾಗೇಜ್ ಸ್ಕ್ಯಾನರ್ ಹಾಳಾಗಿತ್ತು. ಈಗ ಸಿಎಂ ಹಣ ಬಿಡುಗಡೆ ಮಾಡಿದ ಮೇಲೆ ಈ ಬ್ಯಾಗೇಜ್ ಸ್ಕ್ಯಾನರ್ ಖರೀದಿಸಿದ್ದೇವೆ ಎಂದು ತಿಳಿಸಿದರು.

ವಿಧಾನಸೌಧದಲ್ಲಿ ಭದ್ರತೆಯನ್ನು ಇನ್ನೂ ಜಾಸ್ತಿ ಮಾಡುತ್ತೇವೆ. ಈ ಬಾರಿಯ ಅಧಿವೇಶನದಲ್ಲಿ ನಾವು ಹೆಚ್ಚು ಭದ್ರತೆ ಕೈಗೊಳ್ಳುತ್ತೇವೆ. ಕಳೆದ ವಿಧಾನ ಸಭೆ ಅಧಿವೇಶನ ಸಮಯದಲ್ಲಿ ಬ್ಯಾಗೇಜ್ ಸ್ಕ್ಯಾನರ್‌ಗಳು ಇರಲಿಲ್ಲ. ಈಗ 2-3 ಕೋಟಿ ರೂ. ಖರ್ಚು ಮಾಡಿ ನಾಲ್ಕು ಗೇಟ್ ಗಳಲ್ಲಿ ಹೊಸ ಬ್ಯಾಗೇಜ್ ಸ್ಕ್ಯಾನರ್ ಅಳವಡಿಸಿದ್ದೇವೆ ಎಂದು ಹೇಳಿದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!