SHOCKING | ಲವ್‌ ಮಾಡೋದಿಲ್ಲ ಎಂದಿದ್ದಕ್ಕೆ ಆಕೆಯ ತಾಯಿ, ತಮ್ಮನನ್ನು ಭೀಕರವಾಗಿ ಕೊಂದ!!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ತನ್ನ ಪ್ರೀತಿಗೆ ನಿರಾಕರಣೆ ಮಾಡಿದ್ದಕ್ಕೆ ಸಿಟ್ಟಿಗೆದ್ದ ಯುವಕ ಪ್ರೀತಿಸಿದ ಯುವತಿಯ ತಾಯಿ ಹಾಗೂ ಆಕೆಯ ತಮ್ಮನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ನಿಪ್ಪಾಣಿ ತಾಲೂಕಿ ಅಕ್ಕೋಳ ಗ್ರಾಮದಲ್ಲಿ ನಡೆದಿದೆ.

ಮಂಗಲ ನಾಯಕ್ ( 45 ), ಪ್ರಜ್ವಲ್ ನಾಯಕ್ ( 18 ) ಮೃತ ದುರ್ದೈವಿಗಳು. ನಿಪ್ಪಾಣಿ ತಾಲೂಕಿನ ಅಕ್ಕೋಳ ಗ್ರಾಮದ ಹೊರ ವಲಯದ ಮನೆಯಲ್ಲಿ ಬುಧವಾರ ರಾತ್ರಿ ಘಟನೆ ನಡೆದಿದ್ದು, ಜನ ಬೆಚ್ಚಿ ಬಿದ್ದಿದ್ದಾರೆ.

ಕೃತ್ಯ ಎಸಗಿರುವ ಪಾಗಲ್ ಪ್ರೇಮಿ ರವಿ ಎಂದು ತಿಳಿದುಬಂದಿದೆ. ಈತ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ ಇವರ ಪ್ರೀತಿಗೆ ಮನೆಯವರು ತುಂಬಾ ವಿರೋಧ ಮಾಡಿದ್ದರು. ಯಾವುದೇ ಕಾರಣಕ್ಕೂ ಮದುವೆಗೆ ಒಪ್ಪಿಗೆ ಸಿಗದ ಕಾರಣ ಕೊಲೆ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.‌

ಘಟನೆಗೆ ಸಂಬಂಧಿಸಿದಂತೆ ಆರೋಪಿ ರವಿ, ಆತನ ಸ್ನೇಹಿತ ಹಾಗೂ ಹತ್ಯೆಗೆ ಒಳಗಾದ ಮಂಗಲ ಅವರ ಮಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದು, ನಿಪ್ಪಾಣಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

- Advertisement - Prestige

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!