ಹೊಸ ದಿಗಂತ ವರದಿ,ಪಾವಗಡ:
ಮೇಕೆಗಳನ್ನು ಕದ್ದೊಯ್ಯಲು ಕುರಿಗಾಹಿಯನ್ನೇ ಕೊಲೆ ಮಾಡಿ ಸಂತೆಯಲ್ಲಿ ಮಾರಾಟ ಮಾಡುತ್ತಿದ್ದ ವೇಳೆ ಆರೋಪಿ ಸಿಕ್ಕಿಬಿದ್ದಿರುವ ಘಟನೆ ತಾಲೂಕಿನ ಅರಸೀಕೆರೆ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ತಾಲೂಕಿನ ಕೇಟಿ ಹಳ್ಳಿ ಗ್ರಾಮ ಪಂಚಾಯಿತಿ ಮಾಜಿ ಉಪಾಧ್ಯಕ್ಷ ಹಾಗೂ ದೇವನಕೆರೆ ಗ್ರಾಮಕ್ಕೆ ಸೇರಿದ ನರಸಿಂಹಪ್ಪ(60) ಮೃತ ದುರ್ದೈವಿಯಾಗಿದ್ದಾನೆ. ನೆರೆಯ ಕರಿಯಮ್ಮನ ಪಾಳ್ಯ ಗ್ರಾಮದ ಮಣಿಕಂಠ(29) ಕೊಲೆ ಮಾಡಿರುವ ಆರೋಪಿಯಾಗಿದ್ದಾನೆ.
ನರಸಿಂಹಪ್ಪ ಎಂದಿನಂತೆ ತನ್ನ ಮೇಕೆಗಳನ್ನು ತಿಮ್ಮಪ್ಪನ ಬೆಟ್ಟದ ತಪ್ಪಲಿನಲ್ಲಿ ಮೇಯಿಸುತ್ತಿದ್ದಾಗ ಮೇಕೆಗಳನ್ನು ಕದಿಯಲು ಬಂದಿದ್ದ ಮಣಿಕಂಠ ನರಸಿಂಹಪ್ಪನ ಕುತ್ತಿಗೆ ಕೊಯ್ದು ಎಡಗೈಯಲ್ಲಿರುವ ಬೆರಳುಗಳನ್ನು ಕತ್ತರಿಸಿ ಕೊಲೆ ಮಾಡಿ ಮೇಕೆಗಳನ್ನು ಚಿತ್ರದುರ್ಗ ಜಿಲ್ಲೆಯ ಹಿರಿಯೂರಿನ ಸಂತೆಯಲ್ಲಿ ಮಾರಾಟ ಮಾಡಲು ತೆರಳಿದ್ದಾಗ ಪೊಲೀಸರಿಗೆ ಸಿಕ್ಕಿಬಿದ್ದಿದ್ದಾನೆ.
ನರಸಿಂಹಪ್ಪ ಶುಕ್ರವಾರ ದಡ ರಾತ್ರಿಯಾದರೂ ಮನೆಗೆ ಹಿಂತಿರುಗದ ಹಿನ್ನೆಲೆಯಲ್ಲಿ ಕುಟುಂಬಸ್ಥರು ಹುಡುಕಾಟ ನಡೆಸಿದಾಗ 30 ಮೇಕೆಗಳನ್ನು ಹಿರಿಯೂರು ಕಡೆಗೆ ಒಡೆದುಕೊಂಡು ಹೋಗಿರುವ ವಿಷಯ ತಿಳಿದು ಬಂದಿತು ತಕ್ಷಣ ಎಚ್ಚೆತ್ತ ಕುಟುಂಬಸ್ಥರು ಅರಸೀಕೆರೆ ಠಾಣೆಯಲ್ಲಿ ದೂರು ದಾಖಲಿಸಿ ಸಂತೆಯಲ್ಲಿ ಪರಿಶೀಲನೆ ಮಾಡಿದಾಗ 30 ಮೇಕೆಗಳೊಂದಿಗೆ ಆರೋಪಿ ಮಣಿಕಂಠ ಸಿಕ್ಕಿಬಿದ್ದಿದ್ದಾನೆ . ಪೊಲೀಸರು ವಿಚಾರಣೆ ನಡೆಸಿದಾಗ ನರಸಿಂಹಪ್ಪ ನನ್ನು ಕೊಲೆ ಮಾಡಿ ಬಚ್ಚಿಟ್ಟಿದ್ದ ಜಾಗವನ್ನು ಆರೋಪಿ ಪೊಲೀಸರಿಗೆ ತೋರಿಸಿದ್ದಾನೆ ಎಂದು ತಿಳಿದುಬಂದಿದೆ.