ಹೊಸದಿಗಂತ ಡಿಜಿಟಲ್ ಡೆಸ್ಕ್:
ಆರೋಗ್ಯ ಚೆನ್ನಾಗಿಲ್ಲದಿದ್ದರೆ, ಎಷ್ಟು ಕೋಟಿ ಆಸ್ತಿಯಿದ್ದರೇನು ಪ್ರಯೋಜನ..? ನಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಆಹಾರ ಅತ್ಯಂತ ಮುಖ್ಯ. ನಾವು ಸೇವಿಸುವ ಆಹಾರದಲ್ಲಿ ಸರಿಯಾದ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕು. ಉತ್ತಮ ಆರೋಗ್ಯಕ್ಕಾಗಿ ತಜ್ಞರ ನೀಡಿರುವ ಏಳು ಮಾರ್ಗಗಳನ್ನು ನೋಡೋಣ.
1. ದಿನಕ್ಕೆ ಮೂರು ಬಾರಿ ನಿಯಮಿತ ಆಹಾರ ಸೇವನೆ ಬಹಳ ಮುಖ್ಯವಾದುದು. ಆಹಾರ ಪೌಷ್ಟಿಕವಾಗಿರಬೇಕು ಊಟದ ಜೊತೆಗೆ ಹಣ್ಣುಗಳು ಮತ್ತು ಹಸಿ ತರಕಾರಿ ಸೇವನೆ ಉತ್ತಮ
2. ನಿಮ್ಮ ಆಹಾರವು ದಿನಕ್ಕೆ ಕನಿಷ್ಠ 400 ಗ್ರಾಂ ಹಣ್ಣುಗಳು ಮತ್ತು ತರಕಾರಿಗಳನ್ನು ಒಳಗೊಂಡಿರಬೇಕು. ಸಿರಿಧಾನ್ಯಗಳ ಜೊತೆಗೆ ಮೊಸರು ಮತ್ತು ಹಣ್ಣಿನ ಸಲಾಡ್‌ಗಳನ್ನು ಸೇವಿಸಿ.
3. ಫೈಬರ್ ಮಧುಮೇಹದಂತಹ ಅಡ್ಡ ಪರಿಣಾಮಗಳನ್ನು ತಡೆಯಲು ಸಹಾಯ ಮಾಡುತ್ತದೆ. ಎಣ್ಣೆಯಲ್ಲಿ ಕರಿದ ಪದಾರ್ಥಗಳಿಂದ ದೂರವಿರುವುದು ಉತ್ತಮ.
4. ಕೊಬ್ಬು ರಹಿತ ಆಹಾರವನ್ನು ಸೇವಿಸಿ. 100 ಗ್ರಾಂ ಡೈರಿ ಉತ್ಪನ್ನಗಳು ಮೂರು ಗ್ರಾಂ ಕೊಬ್ಬನ್ನು ಹೊಂದಿರುತ್ತವೆ. ಹಾಗಾಗಿ ಕಡಿಮೆ ಕೊಬ್ಬಿನ ಡೈರಿ ಉತ್ಪನ್ನಗಳು ಹಾಗೂ ಸ್ಕಿನ್ ಲೆಸ್ ಚಿಕನ್ ತೆಗೆದುಕೊಳ್ಳಿ.
5. ನೀವು ಮಾಂಸಾಹಾರಿಗಳಾಗಿದ್ದರೆ ವಾರಕ್ಕೆ ಎರಡು ಬಾರಿಯಾದರೂ ಮೀನು ತಿನ್ನುವುದು ಉತ್ತಮ.
6. ನೀವು ಸೇವಿಸುವ ಆಹಾರದಲ್ಲಿ ಉಪ್ಪು ಮತ್ತು ಸಕ್ಕರೆ ಕಡಿಮೆ ಇರುವಂತೆ ನೋಡಿಕೊಳ್ಳಿ. ದಿನಕ್ಕೆ ಒಂದು ಟೀ ಚಮಚಕ್ಕೆ 2,300 ಮಿಲಿಗ್ರಾಂ ಸೋಡಿಯಂ ಮೀರದಂತೆ ಎಚ್ಚರಿಕೆ ವಹಿಸಿ. ಚಿಪ್ಸ್ ನಂತಹ ಖಾರ ಪದಾರ್ಥಗಳನ್ನು ಸೇವಿಸದಿರುವುದು ಉತ್ತಮ.
7. ವ್ಯಾಯಾಮಕ್ಕಾಗಿ ಪ್ರತಿದಿನ ಒಂದು ಗಂಟೆ ನಿಗದಿಪಡಿಸಿ. ಇದರಿಂದ ದಿನವಿಡೀ ಚಟುವಟಿಕೆಯಿಂದ ಇರಲು ಮತ್ತು ಆರೋಗ್ಯವಾಗಿರಲು ಸಾಧ್ಯವಾಗುತ್ತದೆ.