RELATIONSHIP | ಸಂಬಂಧಗಳನ್ನು ಆರೋಗ್ಯವಾಗಿ ಇಟ್ಟುಕೊಳ್ಳೋಕೆ ಇಲ್ಲಿದೆ ಕೆಲವು ಟಿಪ್ಸ್..

ದೇಹದ ಆರೋಗ್ಯದ ಬಗ್ಗೆ ಎಷ್ಟು ಕಾಳಜಿ ಮಾಡ್ತಿವೋ ಮನಸ್ಸಿನ ಆರೋಗ್ಯದ ಬಗ್ಗೆಯೂ ಅಷ್ಟೇ ಕಾಳಜಿ ಮಾಡ್ತೇವೆ ಆದರೆ ಸಂಬಂಧಗಳ ಆರೋಗ್ಯದ ಬಗ್ಗೆ ಎಂದಾದರೂ ಆಲೋಚಿಸಿದ್ದೀರಾ? ನಿಮ್ಮ ಸಂಬಂಧ ಆರೋಗ್ಯಕರವಾಗಿದ್ದರೆ, ದೈಹಿಕ ಹಾಗೂ ಮಾನಸಿಕ ಆರೋಗ್ಯ ಚೆನ್ನಾಗಿಯೇ ಇರುತ್ತದೆ. ಇವೆಲ್ಲವೂ ಒಂದರ ಮೇಲೊಂದು ಅವಲಂಬಿತವಾಗಿದೆ. ಆರೋಗ್ಯಕರ ಸಂಬಂಧಗಳಿಗಾಗಿ ಈ ವಿಷಯಗಳನ್ನು ಮನಸ್ಸಿನಲ್ಲಿಡಿ..
ಮಾತು ನಿಲ್ಲಿಸಬೇಡಿ, ಎಂಥ ದೊಡ್ಡ ಜಗಳವೇ ಆಗಿರಲಿ, ಮನಸ್ತಾಪವೇ ಇರಲಿ. ಮಾತು ನಿಲ್ಲುವುದು ಬೇಡ, ಬೇಸಿಕ್ ಮಾತುಕತೆ ಜಾರಿಯಲ್ಲಿರಲಿ.

  • ಭಾವನೆಗಳ ಬಗ್ಗೆ ಓಪನ್ ಆಗಿರಿ, ಎಲ್ಲವನ್ನೂ ಮನಸ್ಸಿನಲ್ಲಿಯೇ ನುಂಗಿಕೊಳ್ಳಬೇಡಿ ಒಂದು ದಿನ ಎಲ್ಲವೂ ವಾಂತಿಯಾಗುತ್ತದೆ, ಆಗ ರಂಪ ರಾಡಿಯಾಗೋದು ಗ್ಯಾರೆಂಟಿ!
  • ಪರಸ್ಪರ ನಂಬಿಕೆ ಇರಲಿ, ಇದು ನಿಮ್ಮ ಸಂಬಂಧದ ಫೌಂಡೇಷನ್ ಆಗಿರಲಿ.
  • ಗೌರವಕ್ಕೆ ಬೌಂಡರಿಗಳನ್ನು ಸೆಟ್ ಮಾಡಿಕೊಳ್ಳಿ, ಗಂಡ ಹೆಂಡತಿ ಅಥವಾ ಸಂಗಾತಿ ಎಂದರೆ ಎಲ್ಲ ಖುಲ್ಲಂ ಖುಲ್ಲಾ ಎಂದರ್ಥ ಅಲ್ಲ. ಇಬ್ಬರಿಗೂ ಪ್ರೈವೆಸಿ ಇರಲಿ. ಅದನ್ನು ಗೌರವಿಸುವ ಗುಣವೂ ಇರಲಿ.
  • ಇನ್ನೊಬ್ಬರು ಮಾತನಾಡುವಾಗ ಕೇಳಿಸಿಕೊಳ್ಳದೆ ಇರೋದು ಸಾಕಷ್ಟು ಮಂದಿ ಮಾಡುವ ತಪ್ಪು, ನಿಮ್ಮ ಟೆನ್ಶನ್ ಸಾವಿರ ಇರಲಿ, ಸಂಗಾತಿ ಮಾತಿಗೆ ಕಿವಿಯಾಗಿ.
  • ಒಬ್ಬರಿಗೊಬ್ಬರು ಪ್ರೀತಿ ಕರುಣೆ ಸದಾ ತೋರಿಸಿ, ಕಂಜೂಸಾಗಬೇಡಿ.
  • ಕೆಲಸದಲ್ಲಿ ಅಥವಾ ಬ್ಯುಸಿನೆಸ್‌ನಲ್ಲಿ ಒಬ್ಬರಿಗೊಬ್ಬರು ಸಪೋರ್ಟ್ ಮಾಡಿ.
  • ಯಾವುದೇ ನಿರ್ಧಾರವಿರಲಿ ಇಬ್ಬರೂ ಸೇರಿ ತೆಗೆದುಕೊಳ್ಳಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!