ಸಾಮಾಗ್ರಿಗಳು
ಅಕ್ಕಿ
ಹೆಸರುಬೇಳೆ
ಪಾಲಕ್
ಟೊಮ್ಯಾಟೊ
ಈರುಳ್ಳಿ
ಶುಂಠಿ ಬೆಳ್ಳುಳ್ಳಿ ಪೇಸ್ಟ್
ಎಣ್ಣೆ
ಖಾರದಪುಡಿ ಸಾಂಬಾರ್ ಪುಡಿ
ಮಾಡುವ ವಿಧಾನ
ಮೊದಲು ಅಕ್ಕಿ ಹಾಗೂ ಹೆಸರುಬೇಳೆ ನೆನೆಸಿಡಿ
ನಂತರ ಬಿಸಿನೀರಿಗೆ ಪಾಲಕ್ ಹಾಕಿ, ಅದು ತಣ್ಣಗಾದ ನಂತರ ಪಾಲಕ್ ಪೇಸ್ಟ್ ತಯಾರಿಸಿ
ನಂತರ ಕುಕ್ಕರ್ಗೆ ಎಣ್ಣೆ ಸಾಸಿವೆ ಜೀರಿಗೆ ಹಾಕಿ, ನಂತರ ಹಿಂಗ್ ಹಾಗೂ ಈರುಳ್ಳಿ, ಶುಂಠಿ ಬೆಳ್ಳುಳ್ಳಿ ಪೇಸ್ಟ್ ಹಾಕಿ
ನಂತರ ಟೊಮ್ಯಾಟೊ ಹಾಕಿ, ಅರಿಶಿಣ ಹಾಕಿ
ನಂತರ ಪಾಲಕ ಪೇಸ್ಟ್ ಹಾಗೂ ಉಪ್ಪು ಹಾಕಿ ಬಾಡಿಸಿ, ಸಾಂಬಾರ್ ಪುಡಿ, ಖಾರದಪುಡಿ ಹಾಕಿ
ನಂತರ ಅದಕ್ಕೆ ಅಕ್ಕಿ ಹಾಗೂ ಬೇಳೆ ಹಾಕಿ ಮಿಕ್ಸ್ ಮಾಡಿ
ನೀರು ಹಾಕಿ ಎರಡು ವಿಶಲ್ ಕೂಗಿಸಿದ್ರೆ ಕಿಚಡಿ ರೆಡಿ