ಸಾಮಾಗ್ರಿಗಳು
ಶುಂಠಿ
ಬೆಳ್ಳುಳ್ಳಿ
ತುಪ್ಪ
ಜೀರಿಗೆ
ಸಾಸಿವೆ
ಕರಿಬೇವು
ಸೋರೆಕಾಯಿ
ಪಾಲಕ್
ಕ್ಯಾರೆಟ್
ಪುದೀನ
ಕೊತ್ತಂಬರಿ ಸೊಪ್ಪು
ಹಸಿಮೆಣಸು
ಅಕ್ಕಿ
ಹೆಸರುಬೇಳೆ
ನಿಂಬೆರಸ
ಮಾಡುವ ವಿಧಾನ
ಮೊದಲು ಕುಕ್ಕರ್ಗೆ ತುಪ್ಪ, ಕರಿಬೇವು, ಶುಂಠಿ ಬೆಳ್ಳುಳ್ಳಿ ಸಣ್ಣದಾಗಿ ಹೆಚ್ಚಿ ಹಾಕಿಕೊಳ್ಳಿ
ಆನಂತರ ಇದಕ್ಕೆ ಹಸಿಮೆಣಸಿನಕಾಯಿ ಹಾಕಿ
ನಂತರ ಸಣ್ಣದಾಗಿ ಚಾಪ್ ಮಾಡಿದ ಕ್ಯಾರೆಟ್ ಸೋರೆಕಾಯಿ ಪುದೀನ ಪಾಲಕ್ ಹಾಗೂ ಕೊತ್ತಂಬರಿ ಸೊಪ್ಪು ಹಾಕಿ ಸಾಟೆ ಮಾಡಿ
ನಂತರ ಉಪ್ಪು ಹಾಕಿ, ಆನಂತರ ಅಕ್ಕಿ ಹಾಗೂ ಹೆಸರುಬೇಳೆಯ ಮಿಶ್ರಣ ಹಾಕಿ
ಒಂದು ಲೋಟ ಹೆಸರುಬೇಳೆಗೆ ಒಂದು ಲೋಟ ಅಕ್ಕಿ ಬಳಸಬೇಕು. ಇದಕ್ಕೆ ತಕ್ಕಷ್ಟು ನೀರು ಹಾಕಿ ಎರಡು ವಿಶಲ್ ಕೂಗಿಸಿದ್ರೆ ಕಿಚಡಿ ರೆಡಿ
ಲಾಭಗಳೇನು?
ಸೋರೆಕಾಯಿ, ಬೇಳೆ ಹಾಗೂ ಅಕ್ಕಿಯ ಕಾಂಬಿನೇಷನ್ನಿಂದ ಹೊಟ್ಟೆಯ ಆರೋಗ್ಯ ಅದ್ಭುತವಾಗಿರುತ್ತದೆ. ಸೋರೆಕಾಯಿ ಹೃದಯಕ್ಕೆ ಅತ್ಯುತ್ತಮ. ತೂಕ ಇಳಿಕೆ ಅಥವಾ ದೇಹದಿಂದ ಟಾಕ್ಸಿನ್ಗಳನ್ನು ಹೊರಕ್ಕೆ ತಳ್ಳಲು ಬಯಸುವವರು ಸೋರೆಕಾಯಿ ಕಿಚಡಿಯನ್ನು ನಿಮ್ಮ ಡಯಟ್ನಲ್ಲಿ ಸೇರಿಸಿಕೊಳ್ಳಬಹುದು. ಆರೋಗ್ಯಕರ ಮೂಳೆಗಳು, ಇಮ್ಯುನಿಟಿ, ಚರ್ಮದ ಹೊಳಪಿಗೂ ಸೋರೆಕಾಯಿ ಬೆಸ್ಟ್ ತರಕಾರಿ



