October 10, 2026
Saturday, October 10, 2026
spot_img

ಕೆಲವೇ ಸಮಯದಲ್ಲಿ ತಯಾರಾಗುವ ಮ್ಯಾಕ್ರೋನಿ ಚಿಪ್ಸ್‌, ಸುಲಭವಾದ ಸ್ನ್ಯಾಕ್ಸ್‌ ರೆಸಿಪಿ ಇಲ್ಲಿದೆ

ಸಾಮಾಗ್ರಿಗಳು

ಮ್ಯಾಕ್ರೋನಿ
ಕಾರ್ನ್‌ಫ್ಲೋರ್‌
ಖಾರದಪುಡಿ
ಚಾಟ್‌ ಮಸಾಲಾ
ಉಪ್ಪು
ಎಣ್ಣೆ

ಮಾಡುವ ವಿಧಾನ

ಮೊದಲು ಮ್ಯಾಕ್ರೋನಿಯನ್ನು ನೀರಿಗೆ ಹಾಕಿ ನೆನೆಸಿ, ಕುದಿಸಿ, ಬೇಯಿಸಿ. ಜೊತೆಗೆ ಉಪ್ಪು ಸೇರಿಸಿ.

ಬೆಂದ ನಂತರ ಇದನ್ನು ಒಂದು ಕಡೆ ಇಟ್ಟು ಶೋಧಿಸಿಕೊಳ್ಳಿ. ಆನಂತರ ಇದಕ್ಕೆ ಕಾರ್ನ್‌ಫ್ಲೋರ್‌, ಉಪ್ಪು, ಹಾಗೂ ಖಾರದಪುಡಿ ಹಾಕಿ ಬಿಡಿ ಬಿಡಿ ಮಾಡಿಕೊಳ್ಳಿ

ನಂತರ ಕಾದ ಎಣ್ಣೆಗೆ ಮ್ಯಾಕ್ರೋನಿ ಹಾಕಿದ್ರೆ ಚಿಪ್ಸ್‌ ರೆಡಿ. ಎಣ್ಣೆಯಲ್ಲಿ ಕರೆದಿದ್ದನ್ನು ತಿನ್ನೋದಿಲ್ಲ ಎಂದಾದರೆ ಏರ್‌ಫ್ರೈಯರ್‌ನಲ್ಲಿ ಮಾಡಿಕೊಳ್ಳಬಹುದು.

ಇದನ್ನು ಮಾಡಿ ಒಂದು ಏರ್‌ಟೈಟ್‌ ಬಾಕ್ಸ್‌ನಲ್ಲಿ ಇಟ್ಟರೆ ಒಂದು ತಿಂಗಳವರೆಗೂ ಹಾಳಾಗುವುದಿಲ್ಲ, ವಾಸನೆಯೂ ಬರುವುದಿಲ್ಲ. ದಸರಾ ರಜೆಯಲ್ಲಿ ಮಕ್ಕಳು ಕೇಳಿದಾಗೆಲ್ಲ ಇದನ್ನು ನೀಡಬಹುದಾಗಿದೆ.

Must Read