ಹೊಸದಿಗಂತ ಡಿಜಿಟಲ್ ಡೆಸ್ಕ್:
ರುಚಿ ರುಚಿಯಾದ ಮಜ್ಜಿಗೆ ದೋಸೆ ಎಂದಾದ್ರು ತಿಂದಿದ್ದೀರಾ? ಇಲ್ಲಾಂದ್ರೆ ಈಗಲೇ ಟ್ರೈ ಮಾಡಿ ಸವಿದು ನೋಡಿ.
ಬೇಕಾಗುವ ಸಾಮಾಗ್ರಿಗಳು:
*ಉದ್ದಿನ ಬೇಳೆ
*ಅಕ್ಕಿ
*ಮೊಸರು
*ಕಪ್
*ಅವಲಕ್ಕಿ
*ಉಪ್ಪು
*ಬೆಲ್ಲ
ಮಾಡುವ ವಿಧಾನ:
* ಮೊದಲಿಗೆ ಅಕ್ಕಿ ಮತ್ತು ಉದ್ದನ್ನು 3 ಗಂಟೆಗಳ ಕಾಲ ನೆನೆಸಿಡಿ ನಂತರ ನುಣ್ಣಗೆ ರುಬ್ಬಿಕೊಳ್ಳಿ.
* ರುಬ್ಬುವಾಗ ಅವಲಕ್ಕಿಯನ್ನು ತೊಳೆದು ಹಿಟ್ಟಿಗೆ ಸೇರಿಸಿ.
* ಅಕ್ಕಿ ಹಿಟ್ಟನ್ನು ಹುಳಿ ಬರುವುದಕ್ಕಾಗಿ ಎಂಟು ಗಂಟೆಗಳ ಕಾಲ ಮುಚ್ಚಿಡಿ.
* ಇದೇ ವೇಳೆ ಹಿಟ್ಟಿಗೆ ಮೊಸರು ಮತ್ತು ತುರಿದ ಬೆಲ್ಲ ಹಾಗೂ ಉಪ್ಪನ್ನು ಸೇರಿಸಿ.
* ಒಲೆ ಮೇಲೆ ತವಾ ಇಟ್ಟು ಬಿಸಿ ಮಾಡಿ ನಂತರ ಒಂದು ಸೌಟಿನಷ್ಟು ಹಿಟ್ಟನ್ನು ತೆಗೆದುಕೊಂಡು ದೋಸೆ ಆಕಾರದಲ್ಲಿ ಹುಯ್ಯಿರಿ. ನಂತರ ಚೆನ್ನಾಗಿ ಬೇಯಿಸಿಕೊಳ್ಳಿ.