ಹಿಜಾಬ್ ಸರಿಯಾಗಿ ಧರಿಸದೇ ಇದ್ರೆ 60 ಛಡಿ ಏಟು, 10 ವರ್ಷ ಜೈಲು! ತಾಲಿಬಾನ್ ಹೊಸ ನಿಯಮ

ಹೊಸದಿಗಂತ ಡಿಜಿಟಲ್ ಡೆಸ್ಕ್:

ತಾಲಿಬಾನ್ ಸರ್ಕಾರದಲ್ಲಿ ಮಹಿಳೆಯರ ಮೇಲೆ ಮತ್ತೊಂದು ಕಠಿಣ ನಿಯಮವನ್ನು ಹೇರಲಾಗಿದೆ. ಮಹಿಳೆಯರು ಹಿಜಾಬ್ ಧರಿಸದಿದ್ದರೆ ಅಥವಾ ಸರಿಯಾಗಿ ಧರಿಸದಿದ್ದರೆ 60 ಛಡಿ ಏಟು ಹಾಗೂ 10 ವರ್ಷ ಜೈಲು ಶಿಕ್ಷೆಯನ್ನು ನೀಡಲಾಗುತ್ತದೆ.

ಈ ನೂತನ ಮಸೂದೆ ಜಾರಿಗೆ ತಾಲಿಬಾನ್ ಚಿಂತನೆ ನಡೆಸಿದ್ದು, ಇದು ಲಿಂಗ ವರ್ಣಬೇಧ ನೀತಿ ಎಂದು ವಿಶ್ವಸಂಸ್ಥೆ ತಜ್ಞರು ಹೇಳಿದ್ದಾರೆ.

ಅನುಚಿತ ಡ್ರೆಸ್ ಧರಿಸಿರುವ ಮಹಿಳೆಗೆ ಯಾವುದೇ ಸೇವೆ ಅಥವಾ ಉತ್ಪನ್ನಗಳನ್ನು ನೀಡಿದವರಿಗೂ ಶಿಕ್ಷೆ ವಿಧಿಸಲಾಗುತ್ತದೆ ಎಂದು ತಾಲಿಬಾನ್ ಸರ್ಕಾರ ಹೇಳಿದೆ. ಮತ್ತೊಂದು ವಿಚಿತ್ರ ನಿಯಮ ಜಾರಿಗೆ ಬಂದರೆ ಇರಾನ್‌ನಲ್ಲಿ ಮಹಿಳೆಯರು ಉಸಿರಾಡದ ವಾತಾವರಣ ಸೃಷ್ಟಿಯಾಗುವ ಸಾಧ್ಯತೆ ಇದೆ!

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!