ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು
*ಗೋಧಿ ಹಿಟ್ಟು
*ಚೀಸ್ (ತುರಿದದ್ದು)
*ಬಾದಾಮಿ
*ಸಕ್ಕರೆ ಪುಡಿ
*ಅಡುಗೆ ಸೋಡಾ
*ಬೆಣ್ಣೆ
*ಹಾಲು
ಮಾಡುವ ವಿಧಾನ:
* ಮೊದಲು ಒಂದು ಪಾತ್ರೆಯಲ್ಲಿ ಗೋಧಿಹಿಟ್ಟು, ಬೆಣ್ಣೆ, ಸಕ್ಕರೆ ಮತ್ತು ಅಡುಗೆ ಸೋಡಾ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ.
* ಅದಕ್ಕೆ ತುರಿದ ಚೀಸ್ ಮತ್ತು ಬಾದಾಮಿ ಹಾಕಿ ಎಲ್ಲವೂ ಚೆನ್ನಾಗಿ ಮಿಕ್ಸ್ ಮಾಡಿ ನಾದಿಕೊಳ್ಳಿ.
* ಈಗ ಅದಕ್ಕೆ ಹಾಲು ಸೇರಿಸಿ ಚಪಾತಿ ಹಿಟ್ಟಿನ ಹದಕ್ಕೆ ಮಿಶ್ರಣಗೊಳಿಸಿ. * ಈ ಹಿಟ್ಟನ್ನು ಸುಮಾರು ಅರ್ಧದಿಂದ ಒಂದಿಂಚು ದಪ್ಪವಿರುವಂತೆ ಲಟ್ಟಿಸಿ ಬಿಸ್ಕತ್ ಆಕಾರದಲ್ಲಿ ಕತ್ತರಿಸುವ ಉಪಕರಣದಿಂದ ಬಿಸ್ಕತ್ತಿನ ಬಿಲ್ಲೆಗಳನ್ನಾಗಿಸಿ.
* ಈ ಬಿಲ್ಲೆಗಳನ್ನು ಬಿಸ್ಕತ್ ಬೇಯಿಸುವ ತಟ್ಟೆಯಲ್ಲಿ ಅಗಲವಾಗಿ ಹರಡಿ (ಬೇಕಿಂಗ್ ಟ್ರೇ) 6) ಈ ತಟ್ಟೆಯನ್ನು ಮೊದಲೇ ಬಿಸಿಮಾಡಿಟ್ಟಿದ್ದ ಓವನ್ ನಲ್ಲಿ 180 ಡಿಗ್ರಿ ತಾಪಮಾನದಲ್ಲಿ ಸುಮಾರು ಹದಿನೈದರಿಂದ ಹದಿನೆಂಟು ನಿಮಿಷ ಬೇಯಿಸಿ.
* ನಂತರ ತಟ್ಟೆಯನ್ನು ಹೊರತೆಗೆದು ಬಿಸ್ಕತ್ತುಗಳನ್ನು ಅದರಲ್ಲಿಯೇ ತಣಿಯಲು ಬಿಡಿ. ಈಗ ರುಚಿಯಾದ ಮನೆಯಲ್ಲೇ ಮಾಡಿದ ಬಾದಾಮಿ-ಚೀಸ್ ಬಿಸ್ಕತ್ ಸವಿಯಲು ಸಿದ್ಧ.