ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿಗಳು:
* ಬಾಳೆಕಾಯಿ
* ಹಸಿಮೆಣಸು
* ಕೊತ್ತಂಬರಿ ಸೊಪ್ಪು
* ಮೊಸರು
* ತುರಿದ ತೆಂಗಿನಕಾಯಿ
* ಉಪ್ಪು
* ಸಾಸಿವೆ
* ಜೀರಿಗೆ
* ಇಂಗಿನ ಪುಡಿ
* ಕರಿಬೇವಿನೆಲೆ
* ಕೆಂಪು ಮೆಣಸು
* ಎಣ್ಣೆ
ಮಾಡುವ ವಿಧಾನ:
* ಉಪ್ಪು ಮತ್ತು ನೀರು ಹಾಕಿ ಕುಕ್ಕರ್‌ನಲ್ಲಿ ಬಾಳೆಕಾಯಿಯನ್ನು ಬೇಯಿಸಿ.
* ಕುಕ್ಕರ್ ತಣ್ಣಗಾದ ಬಳಿಕ ಬೇಯಿಸಿದ ಬಾಳೆಕಾಯಿಯ ಸಿಪ್ಪೆಯನ್ನು ತೆಗೆಯಿರಿ. ನಂತರ ಚೆನ್ನಾಗಿ ಅದನ್ನು ಹಿಸುಕಿಕೊಳ್ಳಿ.
* ಈಗ ತೆಂಗಿನ ತುರಿಯನ್ನು ನುಣ್ಣಗೆ ಪೇಸ್ಟ್‌ನಂತೆ ರುಬ್ಬಿಕೊಳ್ಳಿ. ತದನಂತರ ಅದರ ಜೊತೆಗೆ ಹಸಿಮೆಣಸು ಮತ್ತು ಕರಿಬೇವಿನೆಲೆಯನ್ನು ಹಾಕಿ ರುಬ್ಬಿಕೊಳ್ಳಿ.
* ಈ ಮಿಶ್ರಣಕ್ಕೆ ಮೊಸರನ್ನು ಹಾಕಿ
* ಒಲೆ ಮೇಲೆ ಒಂದು ಪಾತ್ರೆ ಇಡಿ. ನಂತರ ಸ್ವಲ್ಪ ಎಣ್ಣೆ ಹಾಕಿ ಅದು ಬಿಸಿಯಾದೊಡನೆ ಸಾಸಿವೆ, ಜೀರಿಗೆ, ಕೆಂಪು ಮೆಣಸನ್ನು ಹಾಕಿ ಒಗ್ಗರಣೆ ಮಾಡಿಕೊಳ್ಳಿ. ಇದಕ್ಕೆ ಸ್ವಲ್ಪ ಇಂಗಿನ ಪುಡಿ ಹಾಗೂ ಕೊತ್ತಂಬರಿ ಸೊಪ್ಪನ್ನು ಸೇರಿಸಿ ಒಗ್ಗರಣೆ ಮಾಡಿ ನಂತರ ಎಲ್ಲವೂ ಚೆನ್ನಾಗಿ ಮಿಶ್ರ ಮಾಡಿದರೆ ಬಾಳೆಕಾಯಿ ಮೊಸರು ರಾಯಿತ ಸವಿಯಲು ಸಿದ್ಧ.