ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೆಂತೆ ಸೊಪ್ಪು ಹಾಗೂ ಬಾಳೆ ದಿಂಡು ಮಿಶ್ರಿತ ರುಚಿಕರ ಹಾಗೂ ಆರೋಗ್ಯಕರವಾದ ಪಲ್ಯದ ರೆಸಿಪಿಯನ್ನು ಒಮ್ಮೆ ಟ್ರೈ ಮಾಡಿ ಸವಿದು ನೋಡಿ.
ಬೇಕಾಗುವ ಸಾಮಾಗ್ರಿಗಳು:
*ಬಾಳೆ ದಿಂಡು
*ಈರುಳ್ಳಿ
*ಹಸಿಮೆಣಸು
*ಮೆಂತೆ ಸೊಪ್ಪು
*ಗೋಡಂಬಿಯ ಪೇಸ್ಟ್
*ಉಪ್ಪು
*ಅರಿಶಿನ ಪುಡಿ
*ಕೆಂಪು ಮೆಣಸಿನ ಪುಡಿ
*ಎಣ್ಣೆ
*ಕೊತ್ತಂಬರಿ ಸೊಪ್ಪು
ಮಾಡುವ ವಿಧಾನ:
* ಬಾಳೆದಿಂಡನ್ನು ಕತ್ತರಿಸಿ ನೀರಿನಲ್ಲಿ ನೆನೆಸಿಡಿ.
* ಈಗ ತವಾಗೆ ಎಣ್ಣೆ ಹಾಕಿ ಬಿಸಿ ಮಾಡಿ, ಅದರಲ್ಲಿ ಬಾಳೆ ದಿಂಡಿನ ತುಂಡುಗಳನ್ನು ಹಾಕಿ ಹುರಿಯಿರಿ.
*ಈಗ ಮತ್ತೊಂದು ತವೆಯಲ್ಲಿ ಎಣ್ಣೆಯನ್ನು ಬಿಸಿಮಾಡಿ, ಅದಕ್ಕೆ ಹೆಚ್ಚಿಟ್ಟಿರುವ ಈರುಳ್ಳಿಯನ್ನು ಸೇರಿಸಿ ಹುರಿಯಿರಿ.
* ನಂತರ ಗೋಡಂಬಿ ಬೀಜಗಳ ಪೇಸ್ಟ್ ಅನ್ನು ಇದಕ್ಕೆ ಸೇರಿಸಿ ಬೇಯಿಸಿ.
* ಮೆಂತೆಸೊಪ್ಪು, ಹಸಿರು ಮೆಣಸಿನಕಾಯಿಗಳು, ಅರಿಶಿನ ಪುಡಿ, ಹಾಗೂ ಕೆಂಪು ಮೆಣಸಿನ ಪುಡಿಯನ್ನು ತವಾಕ್ಕೆ ಸೇರಿಸಿ ಮಿಶ್ರಣವನ್ನು ಕಲಕುತ್ತಾ ಹುರಿಯಿರಿ.
* ಈಗ ಇದಕ್ಕೆ ಬಾಳೆ ದಿಂಡಿನ ತುಣುಕುಗಳು ಹಾಗೂ ಉಪ್ಪನ್ನು ಸೇರಿಸಿ. ಈಗ ಎಲ್ಲವನ್ನೂ ಚೆನ್ನಾಗಿ ಮಿಶ್ರಗೊಳಿಸಿ ಬೇಯಿಸಿರಿ ನಂತರ ಒಲೆಯಿಂದ ಪಾತ್ರೆಯನ್ನು ಕೆಳಗಿಳಿಸಿ.
* ಈಗ ತವೆಯಲ್ಲಿ ಬೆಂದಿರುವ ಪಲ್ಯಕ್ಕೆ ಮೊದಲೇ ಹೆಚ್ಚಿಟ್ಟಿದ್ದ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿ. ಮೆ೦ತೆ ಸೊಪ್ಪಿನೊಂದಿಗಿನ ಬಾಳೆದಿಂಡಿನ ಪಲ್ಯವು ಈಗ ಸವಿಯಲು ಸಿದ್ಧ.