ಹೊಸದಿಗಂತ ಡಿಜಿಟಲ್ ಡೆಸ್ಕ್:
ನೀವು ವಿವಿಧ ರೀತಿಯ ಪಾಯಸವನ್ನು ಸವಿದಿರುತ್ತೀರಾ… ಆದ್ರೆ ಅದೆಲ್ಲಾ ಬೋರ್ ಆಗಿದ್ರೆ ಕೂಡಲೇ ಟ್ರೈ ಮಾಡಿ ರುಚಿ ಜೊತೆಗೆ ಸರಳವಾದ ವಿಧಾನ ಬಳಸಿ ಮಾಡಬಹುದಾದ ಸೋರೆಕಾಯಿ ಪಾಯಸ ರೆಸಿಪಿ.
ಬೇಕಾಗುವ ಸಾಮಗ್ರಿಗಳು:
ತುಪ್ಪ
ಸೋರೆಕಾಯಿ
ದಪ್ಪ ಹಾಲು
ಕೇಸರಿ
ಏಲಕ್ಕಿ
ಸಕ್ಕರೆ
ಗೋಡಂಬಿ
ದ್ರಾಕ್ಷಿ
ರೋಸ್ ವಾಟರ್
ಮಾಡುವ ವಿಧಾನ:
* ದಪ್ಪ ತಳವಿರುವ ಪಾತ್ರೆಯನ್ನು ಬಿಸಿ ಮಾಡಿ ಅದಕ್ಕೆ ತುಪ್ಪ ಹಾಕಿ.
* ತುಪ್ಪ ಬಿಸಿಯಾದಾಗ ಅದರಲ್ಲಿ ತುರಿದ ಸೋರೆಕಾಯಿ ಹಾಕಿ ಹುರಿಯಿರಿ. ಸೋರೆಕಾಯಿಯ ಹಸಿ ವಾಸನೆ ಹೋಗುವಷ್ಟು ಹೊತ್ತು ಹುರಿಯಿರಿ.
* ನಂತರ ಹಾಲು ಸೇರಿಸಿ, ಉರಿಯನ್ನು ಮೀಡಿಯಂನಲ್ಲಿಟ್ಟು ಸೌಟ್‌ನಿಂದ ಆಡಿಸಿ, ಸಕ್ಕರೆ ಸೇರಿಸಿ ಬೇಯಿಸಿ. * ಹಾಲು ಮೆಲ್ಲನೆ ಕುದಿ ಬರಲು ಪ್ರಾರಂಭವಾದಾಗ ರೋಸ್ ವಾಟರ್ ಹಾಕಿ, ಕೇಸರಿ ಸೇರಿಸಿ.
* ಹಾಲು ಕಡಿಮೆ ಉರಿಯಲ್ಲೇ ಕುದಿಯುತ್ತಾ ಇನ್ನೂ ಸ್ವಲ್ಪ ಮಂದವಾಗಬೇಕು, ಆಗ ಏಲಕ್ಕಿ ಪುಡಿ ಮಾಡಿ ಹಾಕಿ.
* ಬಳಿಕ ಗೋಡಂಬಿ-ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಸೇರಿಸಿದರೆ ಸೋರೆಕಾಯಿ ಪಾಯಸ ಸವಿಯಲು ಸಿದ್ಧ.