RECIPE| ಸಂಜೆ ಸ್ನ್ಯಾಕ್ಸ್‌ಗೆ ಅದ್ಭುತ ರುಚಿ ನೀಡುತ್ತೆ ʼಬ್ರೆಡ್‌ ಕಟ್ಲೆಟ್‌ʼ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಸಂಜೆಯ ವೇಳೆಗೆ ಸ್ನ್ಯಾಕ್ಸ್‌ ತಿನ್ಬೇಕು ಅನಿಸಿದ್ರೆ ಟ್ರೈ ಮಾಡಿ ಸವಿದು ನೋಡಿ ರುಚಿಯಾದ ಬ್ರೆಡ್‌ ಕಟ್ಲೆಟ್‌. ಇದನ್ನು ಮಾಡಲು ಬೇಕಾಗುವ ಸಾಮಾಗ್ರಿಗಳು ಮತ್ತು ಮಾಡುವ ವಿಧಾನ ಇಲ್ಲಿ ತಿಳಿಯಿರಿ.

ಬೇಕಾಗುವ ಸಾಮಾಗ್ರಿಗಳು:

*ಬಿಳಿಯ ಬ್ರೆಡ್ ಎಸಳುಗಳು
*ಹಸಿಮೆಣಸು
*ಕೆಂಪು ಮೆಣಸಿನ ಪುಡಿ
*ಗರಂ ಮಸಾಲಾ
*ಈರುಳ್ಳಿ:
*ಬೇಯಿಸಿದ ಆಲೂಗಡ್ಡೆ
*ಹಸಿರು ಬಟಾಣಿ
*ಜೀರಿಗೆ
*ಅಕ್ಕಿ ಹಿಟ್ಟು
*ಲಿಂಬೆರಸ
*ಉಪ್ಪು
*ಎಣ್ಣೆ:

ಮಾಡುವ ವಿಧಾನ:

* ಒಂದು ದೊಡ್ಡ ಪಾತ್ರೆಯನ್ನು ತೆಗೆದುಕೊಂಡು ಬ್ರೆಡ್ ಮತ್ತು ಆಲೂಗಡ್ಡೆ ಹಾಕಿ.
* ಬ್ರೆಡ್ ಮತ್ತು ಆಲೂಗಡ್ಡೆಗಳನ್ನು ಚೆನ್ನಾಗಿ ಕೈಗಳಿಂದಲೇ ಹಿಸುಕಿ ಮಿಶ್ರಣ ಮಾಡಿಕೊಳ್ಳಿ.
* ಈಗ ಇದಕ್ಕೆ ಹಸಿಮೆಣಸು, ಮೆಣಸಿನ ಪುಡಿ, ಗರಂಮಸಾಮ ಪೌಡರ್, ಈರುಳ್ಳಿ, ಬಟಾಣಿ ಜೀರಿಗೆ, ಉಪ್ಪು ಮತ್ತು ಅಕ್ಕಿಹಿಟ್ಟು ಹಾಕಿ ಬೆರೆಸಿ. ಎಲ್ಲವನ್ನೂ ಚೆನ್ನಾಗಿ ಕಲಕಿ ಚಪಾತಿ ಹಿಟ್ಟಿನಂತಾಗುವಂತೆ ನಾದಿ.
* ಈಗ ಅದಕ್ಕೆ ಲಿಂಬೆರಸ ಬೆರೆಸಿ, ನಂತರ ಚೆನ್ನಾಗಿ ಮಿಶ್ರಣ ಮಾಡಿ
* ಈಗ ಈ ಮಿಶ್ರಣದಿಂದ ಚಿಕ್ಕ ಚಿಕ್ಕ ಉಂಡೆಗಳನ್ನಾಗಿಸಿ ನಿಮಗಿಷ್ಟವಾದ ಕಟ್ಲೆಟ್ ಆಕಾರದಲ್ಲಿ ಲಟ್ಟಿಸಿ
* ಇದೇ ವೇಳೆ ಒಂದು ಹೆಂಚಿನ ಮೇಲೆ ಕೊಂಚವೇ ಎಣ್ಣೆ ಹಾಕಿ ಬಿಸಿಮಾಡಿ.
* ಈಗ ಲಟ್ಟಿಸಿದ ಕಟ್ಲೆಟುಗಳನ್ನು ಕಾವಲಿಯ ಮೇಲಿರಿಸಿ ಮಧ್ಯಮ ಉರಿಯಲ್ಲಿ ಎರಡೂ ಬದಿಗಳು ಕೊಂಚ ಕೆಂಪಗಾಗುವಷ್ಟು ಹುರಿಯಿರಿ.
* ಹುರಿದ ಕಟ್ಲೆಟುಗಳನ್ನು ಒಂದು ತಟ್ಟೆಯ ಮೇಲೆ ಹರಡಿ ಬಿಸಿಬಿಸಿಯಾಗಿಯೇ ಸವಿಯಿರಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!