ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿಗಳು:
ನುಚ್ಚು ಗೋಧಿ
ತುಪ್ಪ
ಬೆಲ್ಲ
ಬಾದಾಮಿ
ಪಿಸ್ತಾ
ಏಲಕ್ಕಿ ಪುಡಿ
ನೀರು
ತಯಾರಿಸುವುದು ಹೇಗೆ?
* ಮೊದಲು ಬೆಲ್ಲವನ್ನು ನೀರಿನಲ್ಲಿ 10 ನಿಮಿಷ ನೆನೆಸಿ
* ನಂತರ ಕುಕ್ಕರ್‌ನಲ್ಲಿ ತುಪ್ಪ ಹಾಕಿ ಬಿಸಿ ಮಾಡಿ. ಅದಕ್ಕೆ ನುಚ್ಚು ಗೋಧಿ ಹಾಕಿ ಹುರಿಯಿರಿ.
* ಬಳಿಕ ನೀರು ಸೇರಿಸಿ ಕುಕ್ಕರ್ ಮುಚ್ಚಳ ಹಾಕಿ, 3-4 ವಿಶಲ್ ಬರುವವರೆಗೆ ಬೇಯಿಸಿ.
* ನಂತರ ಮುಚ್ಚಳ ತೆಗೆದು ನೀರಿನಲ್ಲಿ ನೆನೆ ಹಾಕಿದ್ದ ಬೆಲ್ಲವನ್ನು ನೀರಿನ ಸಹಿತ ಹಾಕಿ.
* ಆನಂತರ ಕುಕ್ಕರ್‌ನ ಮುಚ್ಚಳ ಮುಚ್ಚಿ ಮತ್ತೆ 2 ವಿಶಲ್ ಹಾಕಿಸಿ.
* ಈಗ ಏಲಕ್ಕಿ ಪುಡಿ ಹಾಕಿ ಮಿಶ್ರ ಮಾಡಿ.
* ನೀರಿದ್ದರೆ ಸ್ವಲ್ಪ ಗಟ್ಟಿಯಾಗುವರೆಗೆ ತಿರುಗಿಸುತ್ತಾ ಇರಿ.
* ನಂತರ ಬಿಸಿ-ಬಿಸಿ ಇರುವಾಗಲೇ ಸವಿಯಿರಿ.