FOOD | ವಾರಾಂತ್ಯಕ್ಕೆ ಮಾಡಿ ರುಚಿಯಾದ ಚಿಕನ್‌ ಸಮೋಸ ರೆಸಿಪಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌ :

ದಿನಗಳು ಎಷ್ಟು ಬೇಗ ಕಳೆದು ಹೋಗುತ್ತವೆಯೆಲ್ಲಾ ಎಂದು ಕೆಲವೊಮ್ಮೆ ಅನಿಸಿಬಿಡುತ್ತದೆ. ಇದರ ಜೊತೆಗೆ ದಿನವೂ ಏನಪ್ಪಾ ಅಡುಗೆ ಮಾಡೋದು ಎನ್ನುವುದು ಮಹಿಳೆಯರ ಚಿಂತೆ. ಹಾಗಾದ್ರೆ ಈ ವಾರಾಂತ್ಯಕ್ಕೆ ಮನೆಯಲ್ಲಿ ವಿಶೇಷವಾಗಿ ಏನು ಮಾಡೋದು ಅಂತ ಯೋಚಿಸ್ತಿದೀರಾ ? ಹಾಗಾದ್ರೆ ಮನೆಯಲ್ಲಿ ಒಮ್ಮೆ ಟ್ರೈ ಮಾಡಿ ಗರಿಗರಿಯಾದ ರುಚಿಯಾದ ಚಿಕನ್‌ ಸಮೋಸ ರೆಸಿಪಿ.

ಬೇಕಾಗುವ ಸಾಮಾಗ್ರಿಗಳು :
* ಚಿಕನ್
* ಮೆಣಸಿನ ಹುಡಿ
* ಗರಮ್ ಮಸಾಲಾ
* ಅರಿಶಿನ ಹುಡಿ
* ಫೆನ್ನಲ್ ಹುಡಿ
* ಕಾಳುಮೆಣಸು
* ಕೊತ್ತಂಬರಿ ಹುಡಿ
* ಉಪ್ಪು
* ಎಣ್ಣೆ
* ಈರುಳ್ಳಿ
* ಬೆಳ್ಳುಳ್ಳಿ ಪೇಸ್ಟ್
* ಶುಂಠಿ ಪೇಸ್ಟ್
* ಹಸಿಮೆಣಸು
* ಸಿಲಾಂಟ್ರೊ
* ಮೊಟ್ಟೆ
* ಮೈದಾ

ಮಾಡುವ ವಿಧಾನ :
* ಮೊದಲು ಪ್ಯಾನ್‎ನಲ್ಲಿ ಎಣ್ಣೆಯನ್ನು ಬಿಸಿ ಮಾಡಿ, ಈರುಳ್ಳಿ ಹಾಕಿ ಹುರಿಯಿರಿ.
* ಈಗ ಶುಂಠಿ ಮತ್ತು ಬೆಳ್ಳುಳ್ಳಿ ಪೇಸ್ಟ್ ಅನ್ನು ಹಾಕಿ ಅದಕ್ಕೆ ಚಿಕನ್ ಅನ್ನು ಸೇರಿಸಿ.
* ನಂತರ ಫೆನ್ನಲ್ ಹುಡಿ, ಕಾಳುಮೆಣಸು, ಕೊತ್ತಂಬರಿ ಹುಡಿ, ಅರಿಶಿನ, ಉಪ್ಪು, ಗರಮ್ ಮಸಾಲಾ, ಮೆಣಸಿನ ಹುಡಿ, ಹಸಿಮೆಣಸು ಮತ್ತು ಸಿಲಾಂಟ್ರೊವನ್ನು ಚಿಕನ್‎ಗೆ ಹಾಕಿ ಮಿಶ್ರಣ ಮಾಡಿಕೊಳ್ಳಿ.
* ಮಿಶ್ರಣವನ್ನು ಪ್ಯಾನ್‎ನಲ್ಲಿ ಬೇಯಿಸಿಕೊಳ್ಳಿ.
* ಇನ್ನೊಂದು ಪಾತ್ರೆಯನ್ನು ತೆಗೆದುಕೊಂಡು ಮೈದಾ, ಮೊಟ್ಟೆ, ಸ್ವಲ್ಪ ಉಪ್ಪನ್ನು ಹಿಟ್ಟಿಗೆ ಹಾಕಿ ಮಿಶ್ರ ಮಾಡಿ.
* ಈಗ ಹಿಟ್ಟಿನಿಂದ ಸಣ್ಣ ಉಂಡೆಯನ್ನು ಸಿದ್ಧಪಡಿಸಿ ಮತ್ತು ಚಪ್ಪಟೆ ಹಾಳೆಗಳಲ್ಲಿ ರೋಲ್ ಮಾಡಿಕೊಳ್ಳಿ. ಚಿಕನ್ ಸ್ಟಫಿಂಗ್ ಅನ್ನು ಹಿಟ್ಟಿನೊಳಗೆ ತುಂಬಿಸಿ.
* ಎಣ್ಣೆಯನ್ನು ಬಿಸಿ ಮಾಡಿ ಮತ್ತು ಸಮೋಸಾವನ್ನು ಎಣ್ಣೆಯಲ್ಲಿ ಹುರಿಯಿರಿ. ಇದೀಗ ಚೆನ್ನಾಗಿ ಬೇಯಿಸಿದ ಗರಿಗರಿ ಮತ್ತು ರುಚಿಯಾದ ಚಿಕನ್‌ ಸಮೋಸಾ ರೆಸಿಪಿ ತಿನ್ನಲು ಸಿದ್ದ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!