Monday, December 4, 2023

Latest Posts

FOOD| ಚಾಕೊಲೇಟ್‌ ಪ್ರಿಯರು ಸವಿಯಿರಿ ಚಾಕೊಲೇಟ್ ಕುಲ್ಫಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು:

ಹಾಲು
ಮಿಲ್ಕ್ ಪೌಡರ್
ಚಾಕೊಲೇಟ್
ಸಕ್ಕರೆ
ಪಿಸ್ತಾಚಿಯೋಸ್

ಮಾಡುವ ವಿಧಾನ:

* ಮೊದಲು ಗ್ಲಾಸ್‌ನಲ್ಲಿ ಸ್ವಲ್ಪ ಹಾಲು ತೆಗೆದುಕೊಂಡು ಅದಕ್ಕೆ ಮಿಲ್ಕ್ ಪೌಡರ್ ಸೇರಿಸಿ. ಗಂಟುಗಳು ಬಾರದಂತೆ ಚೆನ್ನಾಗಿ ಮಿಶ್ರಣ ಮಾಡಿಕೊಂಡು ಪಕ್ಕದಲ್ಲಿಡಿ.
* ನಂತರ ಒಂದು ಪಾತ್ರೆಗೆ ಹಾಲನ್ನು ಹಾಕಿ ಕುದಿಸಿ.
* ಇದೀಗ ಮಿಲ್ಕ್ ಪೌಡರ್ ಅನ್ನು ಸೇರಿಸಿ ಹಾಗೂ ಸಕ್ಕರೆಯನ್ನು ಮಿಶ್ರ ಮಾಡಿ ಕುದಿಸಿ.
* ಈಗ ಒಲೆ ಬಂದ್ ಮಾಡಿ ಮತ್ತು ಪಿಸ್ತಾಚಿಯೋಸ್ ಹಾಗೂ ತುರಿದ ಚಾಕಲೇಟ್ ಸೇರಿಸಿ. ಪುನಃ ಮಿಶ್ರ ಮಾಡಿಕೊಳ್ಳಿ. ಸ್ವಲ್ಪ ಹೊತ್ತಿನವರೆಗೆ ಅದನ್ನು ತಣ್ಣಗಾಗಲು ಬಿಡಿ. ಆಗ ಚಾಕೊಲೇಟ್ ಕರಗುತ್ತದೆ.
* ಈ ಮಿಶ್ರಣವನ್ನು ಪ್ಯಾನ್‌ಗೆ ಹಾಕಿ ಮತ್ತು 1 ಗಂಟೆಯಷ್ಟು ಕಾಲ ರೆಫ್ರಿಜರೇಟರ್‌ನಲ್ಲಿಡಿ.
* ಈಗ ಅದನ್ನು ಹೊರಗೆ ತೆಗೆಯಿರಿ ಹಾಗೂ ನೊರೆಯಂತೆ ಮಾಡಿಕೊಳ್ಳಲು ಮಿಕ್ಸರ್‌ನಲ್ಲಿ ಗ್ರೈಂಡ್ ಮಾಡಿಕೊಳ್ಳಿ. * ನಂತರ ಮೋಲ್ಡ್‌ಗಳಿಗೆ ಇದನ್ನು ಸುರಿಯಿರಿ ಹಾಗೂ 5-6 ಗಂಟೆಗಳ ಕಾಲ ಅದನ್ನು ರೆಫ್ರಿಜರೇಟ್ ನಲ್ಲಿಡಿ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!