ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಅಕ್ಕಿ
ಮೆಂತ್ಯೆ
ತೆಂಗಿನಕಾಯಿ
ಅವಲಕ್ಕಿ
ಉಪ್ಪು
ಮಾಡುವ ವಿಧಾನ:
ಮೊದಲು ಒಂದು ಬೌಲ್ ಗೆ ಅಕ್ಕಿ ಮತ್ತು ಮೆಂತ್ಯೆ ಹಾಕಿ, 4 ಗಂಟೆಗಳ ಕಾಲ ನೆನೆಸಿಡಿ. ನಂತರ ಇವುಗಳನ್ನು ಮಿಕ್ಸಿ ಜಾರ್ ಗೆ ಹಾಕಿ ರುಬ್ಬಿಕೊಂಡು ಒಂದು ಬೌಲ್ ಗೆ ಹಾಕಿಡಿ. ಆಮೇಲೆ ಮಿಕ್ಸಿಗೆ ತೆಂಗಿನಕಾಯಿ ಮತ್ತು ನೀರು ಹಾಕಿ ರುಬ್ಬಿಕೊಂಡು, ಅಕ್ಕಿಹಿಟ್ಟಿನ ಬಟ್ಟಲಿಗೆ ಸೇರಿಸಿ. ಎರಡು ಚೆನ್ನಾಗಿ ಬೆರೆಯುವಂತೆ ಮಿಕ್ಸ್ ಮಾಡಿ, 8 ಗಂಟೆಗಳ ಕಾಲ ನೆನೆಯಲು ಇಡಿ.
ಹಿಟ್ಟಿಗೆ ಈಗ ಉಪ್ಪು ಸೇರಿಸಿ, ನಿಧಾನವಾಗಿ ಮಿಶ್ರಣ ಮಾಡಿ. ಒಲೆ ಮೇಲೆ ತವಾ ಬಿಸಿಗಿಟ್ಟು, ಅದು ಬಿಸಿಯಾದ ನಂತರ ದೋಸೆ ಹಿಟ್ಟನ್ನು ಹಾಕಿ ಚೆನ್ನಾಗಿ ಬೇಯಿಸಿ. ರುಚಿಯಾದ ಬಿಸಿ ಬಿಸಿ ತೆಂಗಿನಕಾಯಿ ದೋಸೆ ಸವಿಯಲು ಸಿದ್ಧ.