RECIPE| ಆರೋಗ್ಯವಾಗಿರಲು ತಿನ್ನಿ ಕೊತ್ತಂಬರಿ ಪರೋಟ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಆರೋಗ್ಯವಾಗಿರಲು ಉತ್ತಮ ಆಹಾರ ಸೇವನೆ ಅಗತ್ಯ. ಹಾಗಾಗಿ ಒಮ್ಮೆ ಟ್ರೈ ಮಾಡಿ ಸವಿದು ನೋಡಿ ಕೊತ್ತಂಬರಿ ಪರೋಟ.

ಬೇಕಾಗುವ ಸಾಮಾಗ್ರಿಗಳು:

ಗೋಧಿ ಹಿಟ್ಟು
ಉಪ್ಪು
ಎಣ್ಣೆ
ಕೊತ್ತಂಬರಿ ಸೊಪ್ಪು
ಕೊತ್ತಂಬರಿ ಹುಡಿ
ಜೀರಿಗೆ ಹುಡಿ
ಅರಶಿನ ಹುಡಿ
ಕಡಲೆ ಹಿಟ್ಟು
ಹಸಿಮೆಣಸು

ಮಾಡುವ ವಿಧಾನ:

* ಗೋಧಿ ಹುಡಿ, ಉಪ್ಪು ಮತ್ತು ಸಾಕಷ್ಟು ನೀರು ತೆಗೆದುಕೊಂಡು ಕಲಸಿಕೊಳ್ಳಿ.
* ಬಳಿಕ ಚಪಾತಿ ಆಕಾರದಲ್ಲಿ ಲಟ್ಟಿಸಿಕೊಳ್ಳಿ.
* ಬೌಲ್‌ನಲ್ಲಿ ಸ್ಟಫಿಂಗ್‌ಗೆ ಬೇಕಾಗಿರುವ ಎಲ್ಲಾ ಸಾಮಾಗ್ರಿಗಳನ್ನೂ ಮಿಶ್ರ ಮಾಡಿಕೊಳ್ಳಿ.
* ಬಳಿಕ ಈ ಸ್ಟಫಿಂಗ್‌ನ ಒಂದು ಸ್ಪೂನ್‌ನಷ್ಟನ್ನು ಚಪಾತಿಯ ಮಧ್ಯ ಭಾಗದಲ್ಲಿ ಇರಿಸಿಕೊಳ್ಳಿ.
* ಚಪಾತಿಯ ಬದಿಗಳನ್ನು ಮಡಚಿಕೊಳ್ಳಿ ಮತ್ತು ಸ್ಟಫಿಂಗ್ ಅನ್ನು ಸಂಪೂರ್ಣವಾಗಿ ಇರಿಸಿ ಲಟ್ಟಿಸಿಕೊಳ್ಳಿ.
* ನಂತರ ತವಾ ಬಿಸಿ ಮಾಡಿಕೊಂಡು ಈ ಚಪಾತಿಯನ್ನು ಅದಕ್ಕೆ ಹಾಕಿ.
* ಚಪಾತಿಯ ಎರಡೂ ಬದಿಗಳಿಗೆ ಎಣ್ಣೆ ಸವರಿ ಬೇಯಿಸಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!