ಹೊಸದಿಗಂತ ಡಿಜಿಟಲ್ ಡೆಸ್ಕ್:
ನವಜಾತ ಶಿಶುವಿಗೆ ದೈಹಿಕ ಶಕ್ತಿ ಇರೋದಿಲ್ಲ ಅಂತಾರೆ, ಆದರೆ ವೈರಲ್ ಆಗಿರುವ ವೀಡಿಯೊವು ಅದನ್ನು ತಪ್ಪು ಎಂದು ಸಾಬೀತುಪಡಿಸಿದೆ. ಆಗ ತಾನೆ ಹುಟ್ಟಿದ ಕೂಸೊಂದು ತನ್ನ ಎರಡೂ ಕೈಗಳಿಂದ ಟ್ರೇ ಅನ್ನು ಮೇಲೆತ್ತಿರುವುದು ಆಶ್ಚರ್ಯಕರವಾಗಿದೆ. ಮಗುವನ್ನು ಹಿಡಿದಿದ್ದ ನರ್ಸ್ ಹಾಗೂ ಆಸ್ಪತ್ರೆ ಸಿಬ್ಬಂದಿ ಮಗುವಿನ ಕೈ ಚಳಕ ನೋಡಿ ಬೆಚ್ಚಿಬಿದ್ದರು. ಆದರೆ ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೋಗೆ ಜನರು ಸ್ವಲ್ಪ ಗಂಭೀರವಾಗಿದ್ದಾರೆ. ನರ್ಸ್ ಮಗುವಿನೊಂದಿಗೆ ವರ್ತಿಸಿದ ರೀತಿಗೆ ಕೋಪವನ್ನೂ ವ್ಯಕ್ತಪಡಿಸಿದ್ದಾರೆ.
ಇಂಟರ್‌ನೆಟ್‌ನಲ್ಲಿ ವೈರಲ್ ಆಗುತ್ತಿರುವ ವೀಡಿಯೋವನ್ನು ನೋಡಿದರೆ ನೀವು ಆಶ್ಚರ್ಯ ಪಡುತ್ತೀರಿ. ನವಜಾತ ಶಿಶುವೊಂದು ಅಗಲವಾದ ಆಪರೇಷನ್ ಪರಿಕರಗಳನ್ನಿಡುವ ತಟ್ಟೆಯನ್ನು ಎರಡೂ ಕೈಗಳಿಂದ ಹಿಡಿದು ಎಲ್ಲರನ್ನೂ ಅಚ್ಚರಿಗೊಳಿಸಿದೆ. ನಿಜವಾದ ಬಾಹುಬಲಿ ಹುಟ್ಟಿದ್ದಾನೆ ಎಂದು ನೆಟ್ಟಿಗರು ಕಾಮೆಂಟ್ ಮಾಡುತ್ತಿದ್ದಾರೆ. ಇನ್ನೂ ಕೆಲವರು ‘5G ಲಾಂಚ್ ಬಾಯ್’ ಎಂದರು. ನರ್ಸ್ ಒಬ್ಬರು ಮಗುವನ್ನು ‘ಶಕ್ತಿಮಾನ್’ ಎಂದು ಕರೆಯುವುದು ಕೂಡ ಕೇಳಿಬರುತ್ತಿದೆ. ಈ ವಿಡಿಯೋ ಅಂತರ್ಜಾಲದಲ್ಲಿ ವೈರಲ್ ಆಗುತ್ತಿದೆ.
ನರ್ಸ್ ಮಗುವನ್ನು ತಲೆಕೆಳಗಾಗಿ ಹಿಡಿದು ಎಲ್ಲರಿಗೂ ತೋರಿಸಿದ್ದಕ್ಕೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಯಾರೇ ಆಗಿರಲಿ, ಕೂಡಲೇ ಅವರಿಗೆ ತಕ್ಕ ಬುದ್ದಿ ಹೇಳಿ, ಇದು ಅಮಾನವೀಯ ವರ್ತನೆ ಎಂಬ ಕಮೆಂಟ್‌ಗಳೂ ಬರುತ್ತಿವೆ.
*चन्द्रयान के चन्द्रमा पर पहुँचते ही भारत में जन्मा Real "बाहुबली"* 🚩💪💪🚩 pic.twitter.com/KGHQlowtqJ
— तिवारी दद्दा 🤗 (@bhakttrilokika) August 24, 2023