ಹೊಸದಿಗಂತ ಡಿಜಿಟಲ್ ಡೆಸ್ಕ್:
ಮೊಸರಿನ ಜೊತೆಗೆ ಬೆಂಡೆಕಾಯಿ ಹಾಕಿ ಮಾಡುವ ಸಾಂಬಾರ್ ಅನ್ನು ಎಂದಾದರು ಸವಿದಿದ್ದೀರಾ ? ಇಲ್ಲಾ ಅಂದ್ರೆ ಒಮ್ಮೆ ಟ್ರೈ ಮಾಡಿ ಮೊಸರು ಬೆಂಡೆಕಾಯಿ ಸಾರು.
ಬೇಕಾಗುವ ಸಾಮಾಗ್ರಿಗಳು:
ಬೆಂಡೆಕಾಯಿ
ಈರುಳ್ಳಿ
ಶುಂಠಿ-ಬೆಳ್ಳುಳ್ಳಿ ಪೇಸ್ಟ್
ಮೊಸರು
ತೆಂಗಿನ ತುರಿ
ಗೋಡಂಬಿ
ಗರಂ ಮಸಾಲ
ಖಾರದ ಪುಡಿ
ಅರಿಶಿಣ ಪುಡಿ
ಆಮ್ ಚುರ್ (ಒಣ ಮಾವಿನ ಚೂರು)
ಎಣ್ಣೆ
ಉಪ್ಪು
ನೀರು
ಸಾಸಿವೆ
ಜೀರಿಗೆ
ಉದ್ದಿನ ಬೇಳೆ
ಒಣ ಮೆಣಸು
ಇಂಗು
ಮಾಡುವ ವಿಧಾನ:
* ಮೊದಲು ಬೆಂಡೆಕಾಯಿಯನ್ನು ತೊಳೆದು ಕತ್ತರಿಸಿ. ಬಳಿಕ ಒಂದು ಪಾತ್ರೆಗೆ 1 ಚಮಚ ಎಣ್ಣೆ ಹಾಕಿ ಬಿಸಿ ಮಾಡಿ ಅದರಲ್ಲಿ ಬೆಂಡೆ ಕಾಯಿ ಹಾಕಿ ಫ್ರೈ ಮಾಡಿ.
* ಗೋಡಂಬಿಯನ್ನು 5 ನಿಮಿಷ ಬಿಸಿ ನೀರಿನಲ್ಲಿ ಹಾಕಿಡಿ.
* ಮಿಕ್ಸಿ ಜಾರಿಗೆ ತೆಂಗಿನ ತುರಿ ಹಾಕಿ ನುಣ್ಣನೆ ರುಬ್ಬಿ.
* ಈಗ ಒಂದು ಪಾತ್ರೆಯನ್ನು ಬಿಸಿ ಮಾಡಿ ಅದರಲ್ಲಿ ಎಣ್ಣೆ ಹಾಕಿ, ನಂತರ ಸಾಸಿವೆ, ಉದ್ದಿನ ಬೇಳೆ, ಜೀರಿಗೆ, ಇಂಗು, ಒಣ ಮೆಣಸನ್ನು ಮುರಿದು ಹಾಕಿ ಕಡಿಮೆ ಉರಿಯಲ್ಲಿ ಫ್ರೈ ಮಾಡಿ. ನಂತರ ಈರುಳ್ಳಿ ಹಾಕಿ ಕಂದು ಬಣ್ಣ ಬರುವವರೆಗೆ ಫ್ರೈ ಮಾಡಿ.
* ಈಗ ರುಬ್ಬಿದ ಗೋಡಂಬಿ ಪೇಸ್ಟ್ ಹಾಕಿ 2 ನಿಮಿಷ ಹುರಿಯಿರಿ. ಶುಂಠಿ, ಬೆಳ್ಳುಳ್ಳಿ ಪೇಸ್ಟ್, ಖಾರದ ಪುಡಿ, ಗರಂ ಪುಡಿ, ಅರಿಶಿಣ ಪುಡಿ ಹಾಕಿ ಮತ್ತೆ 2 ನಿಮಿಷ ಹುರಿಯಿರಿ. ನಂತರ ನಿಧಾನಕ್ಕೆ ಮೊಸರು ಹಾಕಿ ಅದಕ್ಕೆ ನೀರು ಸೇರಿಸಿ, ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಕುದಿಸಿ.
* ಸಾರು ಕುದಿ ಬರುವಾಗ ಫ್ರೈ ಮಾಡಿದ ಬೆಂಡೆ ಕಾಯಿ ಮತ್ತೆ 5 ನಿಮಿಷ ಕುದಿಸಿ ಉರಿಯಿಂದ ಕೆಳಗಿಳಿಸಿದರೆ ರುಚಿಯಾದ ಮೊಸರು ಬೆಂಡೆಕಾಯಿ ಸಾರು ಸವಿಯಲು ಸಿದ್ಧ.