ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು
ಮೊಟ್ಟೆ
ಚೀಸ್
ಬ್ರೆಡ್
ಈರುಳ್ಳಿ
ಜೋಳದ ಹಿಟ್ಟು
ಶುಂಠಿ
ಖಾರದ ಪುಡಿ
ಚಾಟ್ ಮಸಾಲ
ಬೆಣ್ಣೆ
ಎಣ್ಣೆ
ಲೆಟಿಸ್ ಎಲೆ
ಮಾಡುವ ವಿಧಾನ
- ಮೊದಲು ಲೆಟಿಸ್ ಎಲೆಗೆ ಬೆಣ್ಣೆ ಹಚ್ಚಿ ಒಂದು ಕಡೆ ಇಡಿ.
- ಒಂದು ಪಾತ್ರೆಯಲ್ಲಿ ಒಡೆದ ಮೊಟ್ಟೆಯನ್ನು ಹಾಕಿ ಅದಕ್ಕೆ ಈರುಳ್ಳಿ, ಹಸಿಮೆಣಸಿನಕಾಯಿ ಮತ್ತು ಶುಂಠಿಯನ್ನು ಸೇರಿಸಿ.
- ಇವೆಲ್ಲವನ್ನೂ ಚೆನ್ನಾಗಿ ಕಲಸಿದ ನಂತರ ಅದಕ್ಕೆ ಚಾಟ್ ಮಸಾಲ ಹಾಕಿ ಕಲಸಿ ಕೊಳ್ಳಿ.
- ಈಗ ಜೋಳದ ಹಿಟ್ಟನ್ನು ಮತ್ತೊಂದು ಪಾತ್ರೆಯಲ್ಲಿ ಸ್ವಲ್ಪ ನೀರು ಸೇರಿಸಿ ಕಲಸಿಟ್ಟುಕೊಳ್ಳಿ.
- ಪ್ರತಿ ಸ್ಲೇಸ್ ಬ್ರೇಡ್ಡಿನ ಮೇಲೆ ಚೀಸ್ ಸ್ಲೇಸ್ ಗಳನ್ನು ಇಡಿ.
- ಈಗ ಮಾಡಿಟ್ಟಿರುವ ಮೊಟ್ಟೆ ಮತ್ತಿತರ ವಸ್ತುಗಳ ಮಿಶ್ರಣವನ್ನು ಈ ಬ್ರೆಡ್ ಸ್ಲೈಸ್ ಗಳ ಮೇಲಿಟ್ಟು ಜೋಳದ ಹಿಟ್ಟನ್ನು ಬಳಸಿ ರೋಲ್ ಮಾಡಿ.
- ಬಾಣಲಿಯಲ್ಲಿ ಎಣ್ಣೆ ಕಾಯಿಸಿಕೊಂಡು ಮಂದ ಉರಿಯಲ್ಲಿಟ್ಟುಕೊಂಡು ರೋಲ್ ಗಳು ಹೊಂಬಣ್ಣಕ್ಕೆ ತಿರುಗುವವರೆಗೆ ಕರಿಯಿರಿ.
- ಕರಿದ ನಂತರ ಅದನ್ನು ಲೆಟಿಸ್ ಎಲೆಗಳೊಂದಿಗೆ ಸೇರಿಸಿಡಿ. ಬಿಸಿಬಿಸಿಯಾದ ಎಗ್ ಚೀಸ್ ರೋಲ್ ಸವಿಯಲು ಸಿದ್ಧ.