ಹೊಸದಿಗಂತ ಡಿಜಿಟಲ್ ಡೆಸ್ಕ್:
ಮಳೆಗಾಲದಲ್ಲಿ ಶೀತ, ಕೆಮ್ಮು, ಜ್ವರ ಇತ್ಯಾದಿ ಆರೋಗ್ಯ ಸಮಸ್ಯೆಗಳು ಎದುರಾಗುವುದು ಸಹಜ. ಅದರಿಂದ ಮುಕ್ತಿ ಹೊಂದಲು ಉತ್ತಮ ಆಹಾರ ಸೇವನೆಯು ಅತ್ಯಗತ್ಯ. ಶೀತವನ್ನು ಬೇಗ ಹೋಗಲಾಡಿಸಿಕೊಳ್ಳಲು ಸಹಕಾರಿ ಈ ಶುಂಠಿ ಸೂಪ್.
ಬೇಕಾಗುವ ಸಾಮಾಗ್ರಿಗಳು:
ಪುಡಿ ಮಾಡಿದ ಶುಂಠಿ
ನೀರು
ಜೇನು
ನಿಂಬೆ ರಸ
ಮಾಡುವ ವಿಧಾನ:
* ಮೊದಲು ನೀರನ್ನು ಚೆನ್ನಾಗಿ ಕುದಿಸಬೇಕು. ನಂತರ ಅದಕ್ಕೆ ಶುಂಠಿಯನ್ನು ಹಾಕಿ ಸಾಧಾರಣ ಉರಿಯಲ್ಲಿ 4-5 ನಿಮಿಷ ಕುದಿಸಬೇಕು.
* ನಂತರ ಜೇನು ಮತ್ತು ನಿಂಬೆ ರಸ ಹಾಕಿ ಉರಿಯಿಂದ ತೆಗೆದು ಬಿಸಿಬಿಸಿಯಾಗಿ ಕುಡಿದರೆ ರುಚಿಯಾಗಿರುತ್ತದೆ. ಅದಲ್ಲದೆ ಶೀತ, ಕೆಮ್ಮು ಇದ್ದರೆ ಮೈಲಿ ದೂರ ಓಡಿ ಹೋಗಿ ಬಿಡುತ್ತದೆ.