ಹೊಸದಿಗಂತ ಡಿಜಿಟಲ್ ಡೆಸ್ಕ್:
ಓಟ್ಸ್ ಆರೋಗ್ಯದಾಯಕ ಮತ್ತು ಪುಷ್ಠಿದಾಯಕವೂ ಹೌದು. ಹಾಗಾಗಿ ಆರೋಗ್ಯಕರ ಮತ್ತು ರುಚಿಕರವಾದ ಓಟ್ಸ್ ರೊಟ್ಟಿ ಮಾಡುವುದು ಹೇಗೆ ಎಂದು ಇಲ್ಲಿ ತಿಳಿಯೋಣ.
ಬೇಕಾಗುವ ಸಾಮಾಗ್ರಿಗಳು:
ಓಟ್ಸ್ ಪುಡಿ
ಪಾಲಕ್ ಸೊಪ್ಪು
ಗೋಧಿ ಹಿಟ್ಟು
ಉಪ್ಪು
ಎಣ್ಣೆ
ಮಾಡುವ ವಿಧಾನ:
ಮೊದಲು ಸಣ್ಣಗೆ ಹೆಚ್ಚಿದ ಪಾಲಕ್ ಸೊಪ್ಪು, ಗೋಧಿ ಹಿಟ್ಟು, ಓಟ್ಸ್ ಪುಡಿ, ಉಪ್ಪು ಮತ್ತು ಸ್ವಲ್ಪ ನೀರು ಹಾಕಿ ರೊಟ್ಟಿ ಹಿಟ್ಟಿನ ಹದಕ್ಕೆ ಕಲೆಸಿಕೊಳ್ಳಿ. ನಂತರ ಬಾಳೆ ಎಲೆ ಅಥವಾ ಪ್ಲಾಸ್ಟಿಕ್ ಮೇಲೆ ಎಣ್ಣೆ ಸವರಿ ಕಲಸಿಟ್ಟ ಹಿಟ್ಟಿನಿಂದ ರೊಟ್ಟಿ ತಟ್ಟಿ ನಂತರ ತವಾದ ಮೇಲೆ ಎಣ್ಣೆ ಹಾಕಿ ಬೇಯಿಸಿದರೆ ರುಚಿಯಾದ ಮತ್ತು ಆರೋಗ್ಯಕರವಾದ ಓಟ್ಸ್ ಪಾಲಕ್ ರೊಟ್ಟಿ ಸವಿಯಲು ಸಿದ್ಧ.