Friday, June 2, 2023

Latest Posts

ಇವರು ಸರ್ವಶ್ರೇಷ್ಠ ನಾಯಕ, ಬಿಎಸ್‌ವೈರನ್ನು ಹಾಡಿ ಹೊಗಳಿದ ಸಚಿವೆ ನಿರ್ಮಲಾ ಸೀತಾರಾಮನ್

ಹೊಸದಿಗಂತ ವರದಿ ಕಲಬುರಗಿ: 

ಕನಾ೯ಟಕದ ಮಾಜಿ ಮುಖ್ಯಮಂತ್ರಿ ಹಾಗೂ ಕೇಂದ್ರೀಯ ಸಂಸದೀಯ ಮಂಡಳಿಯ ಸದಸ್ಯರಾದ ಬಿ.ಎಸ್.ಯಡಿಯೂರಪ್ಪ ನವರು ನಮ್ಮ ಪಕ್ಷದ ಸವ೯ ಶ್ರೇಷ್ಠ ನಾಯಕರಾಗಿದ್ದಾರೆ ಎಂದು ಕೇಂದ್ರ ಸರ್ಕಾರದ ಹಣಕಾಸು ಸಚಿವೆ ಶ್ರೀಮತಿ ನಿಮ೯ಲಾ ಸೀತಾರಾಮನ್ ಹೇಳಿದರು.

ಬುಧವಾರ ನಗರದ ಬಿಜೆಪಿ ಕಾಯಾ೯ಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕನಾ೯ಟಕ ರಾಜ್ಯದ ಮೂಲೆ ಮೂಲೆಗಳಲ್ಲಿ ಪಕ್ಷದ ಬೇರನ್ನು ಗಟ್ಟಿಗೊಳಿಸುವ ಮೂಲಕ ರಾಜ್ಯಾದ್ಯಂತ ಪಕ್ಷವನ್ನು ಬೆಳೆಸಿರುವ ಧೀಮಂತ ನಾಯಕರಾಗಿದ್ದಾರೆ ಎಂದರು.

ಬಿ.ಎಸ್.ಯಡಿಯೂರಪ್ಪ ಇವತ್ತಿಗೂ ನಮ್ಮೆಲ್ಲರ ಶ್ರೇಷ್ಠ ನಾಯಕರಾಗಿದ್ದು,ಇಂದಿನ ದಿನಗಳಲ್ಲಿ ಸಹ ಪಕ್ಷದ ಸಂಘಟನೆಯನ್ನು ಬಲಪಡಿಸುತ್ತಿದ್ದಾರೆ.ಅಂತಹ ನಾಯಕರನ್ನು ನಮ್ಮ ಪಕ್ಷದಲ್ಲಿ ಹಿಂದೆಯೂ ಗೌರವಯುತವಾಗಿ ನಡೆದುಕೊಳ್ಳಲಾಗಿತ್ತು.ಈಗಲೂ ಸಹ ಗೌರವಯುತವಾಗಿ ನಡೆದುಕೊಳ್ಳಲಾಗುತ್ತಿದೆ,ಭವಿಷ್ಯದಲ್ಲೂ ಸಹ ಗೌರವಯುತವಾಗಿ ನಡೆಸಿಕೊಳ್ಳಲಿದ್ದೇವೆ ಎಂದು ಸ್ಪಷ್ಟಪಡಿಸಿದರು.

ರಾಜ್ಯ ಚುನಾವಣೆಯಲ್ಲಿ ಪಕ್ಷ ಅಧಿಕಾರಕ್ಕೆ ಬಂದರೆ,ಮುಂದಿನ ಮುಖ್ಯಮಂತ್ರಿ ಯಾರಾಗುತ್ತಾರೆ ಎಂಬ ಮಾದ್ಯದವರ ಪ್ರಶ್ನೆಗೆ ಉತ್ತರಿಸಿದ ಸಚಿವೆ ಸೀತಾರಾಮನ್, ಮುಖ್ಯಮಂತ್ರಿ ಆಯ್ಕೆ ವಿಚಾರ ಚುನಾವಣಾ ನಂತರ ಪಕ್ಷದ ಹೈಕಮಾಂಡ್ ತೀಮಾ೯ನ ಮಾಡಲಿದೆ.ಈಗೀನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಹ ಚುನಾವಣಾ ಕಣದಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಹೀಗಾಗಿ ಮುಖ್ಯಮಂತ್ರಿ ವಿಚಾರ ಈಗ ಎತ್ತುವುದು ಅಪ್ರಸ್ತುತ ಎಂದ ಅವರು,ಚುನಾವಣೆ ಮುಗಿದ ಮೇಲೆಯೇ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ ಎಂದರು.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!