ಆರೋಗ್ಯಕ್ಕೂ ಒಳ್ಳೆಯದು ಈ ಎಳನೀರಿನ ಐಸ್‌ಕ್ರೀಂ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಬೇಸಿಗೆಗೆ ಎಳನೀರು ತುಂಬಾನೇ ಒಳ್ಳೆಯದು, ಆದ್ದರಿಂದ ನೀವು ಎಳನೀರಿ ಐಸ್‌ಕ್ರೀಮ್‌  ಮಾಡಿ ತಿನ್ನಿರಿ. ಈ ಎಳನೀರಿನ ಐಸ್‌ಕ್ರೀಂ ಆರೋಗ್ಯಕ್ಕೂ ತುಂಬಾನೆ ಒಳ್ಳೆಯದು.

ಬೇಕಾಗುವ ಸಾಮಗ್ರಿಗಳು:

  • ಎಳನೀರಿನ ಗಂಜಿ

* ಜೋಳದ ಹಿಟ್ಟು

* ಮುಕ್ಕಾಲು ಲೀಟರ್ ಹಾಲು

* ಸಕ್ಕರೆ

ಮಾಡುವ ವಿಧಾನ:

* ಎಳನೀರಿನ ಗಂಜಿಯನ್ನುತೆಗೆದು ಮಿಕ್ಸಿಯಲ್ಲಿ ತಿರುಗಿಸಿ ಪೇಸ್ಟ್ ಮಾಡಿ. ರುಬ್ಬಲು ಸ್ವಲ್ಪವೇ ಸ್ವಲ್ಪ ಎಳನೀರು ಬಳಸಿ, ಗಂಜಿ ತೆಳುವಿದ್ದರೆ ಎಳನೀರಿನ ಅವಶ್ಯಕತೆಯಿಲ್ಲ

* ಹಾಲನ್ನು  ಗಟ್ಟಿಯಾಗುವವರೆಗೆ ಕುದಿಸಿ, ಅದಕ್ಕೆ ಸಕ್ಕರೆ ಸೇರಿಸಿ.

* ನೀವು ಒಂದು ಚಿಕ್ಕ ಬೌಲ್‌ಗೆ ಹಾಲು ಹಾಕಿ ಅದರಲ್ಲಿ ಜೋಳದ ಹಿಟ್ಟು ಹಾಕಿ ಗಂಟು ಕಟ್ಟದಂತೆ ಕರಗಿಸಬೇಕು.

* ಈಗ ಜೋಳದ ಮಿಶ್ರಣವನ್ನು ಹಾಲಿಗೆ ಹಾಕಿ ಗಂಟು ಆಗದಂತೆ ತಿರುಗಿಸುತ್ತಾ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ, ಹಾಲು ಮಂದವಾದ ಮೇಲೆ ಗ್ಯಾಸ್‌ ಆಫ್‌ ಮಾಡಿ, ಬಿಸಿ ಸ್ವಲ್ಪ ಕಡಿಮೆಯಾದ ಮೇಲೆ ರುಬ್ಬಿದ ಎಳನೀರಿನ ಪೇಸ್ಟ್‌ ಹಾಕಿ ಮಿಶ್ರಣ ಮಾಡಿ, ಮಿಶ್ರಣ ಇನ್ನಷ್ಟು ಮಂದವಾಗುವುದು. ಈಗ ಅದನ್ನು ಗಾಳಿಯಾಡದಂತೆ ಒಂದು ಪಾತ್ರೆಯಲ್ಲಿ ಹಾಕಿ.

* ಈಗ ಬೌಲ್‌ಗೆ ಹಾಕಿ ಅದರ ಮೇಲೆ ಸಿಲ್ವರ್‌ಫಾಯಿಲ್‌ನಿಂದ ಮುಚ್ಚಬಹುದು. ಈಗ ಈ ಮಿಶ್ರಣವನ್ನು ಡೀಪ್‌ ಫ್ರೀಝರ್‌ನಲ್ಲಿ 3 ಗಂಟೆ ಇಡಿ. ನಂತರ ತೆಗೆದು ಒಂದು ಎರಡು ನಿಮಿಷ ಹಾಗೇ ಬಿಟ್ಟು, ಮತ್ತೆ ಮಿಕ್ಸಿಯಲ್ಲಿ ಹಾಕಿ ತಿರುಗಿಸಿ, ಪಾತ್ರೆಗೆ ಹಾಕಿಟ್ಟು ಫ್ರಿಡ್ಜ್‌ನಲ್ಲಿ ಒಂದು ರಾತ್ರಿ ಇಡಿ. ನಂತರ ತೆಗೆದು 2 ನಿಮಿಷ ಬಿಟ್ಟ ಮೇಲೆ ಬೌಲ್‌ಗೆ ಹಾಕಿ ಮಕ್ಕಳಿಗೆ ಸರ್ವ್ ಮಾಡಿ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!