ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಗ್ರಿಗಳು:
ಜೋಳದ ಹಿಟ್ಟು
ಅಕ್ಕಿ ಹಿಟ್ಟು
ಜೀರಿಗೆ
ಹಸಿರು ಮೆಣಸಿನಕಾಯಿ
ಈರುಳ್ಳಿ
ಎಣ್ಣೆ
ಉಪ್ಪು
ನೀರು
ಮಾಡುವ ವಿಧಾನ:
1) ಒಂದು ಬಟ್ಟಲಿನಲ್ಲಿ ಜೋಳದ ಹಿಟ್ಟು, ಅಕ್ಕಿ ಹಿಟ್ಟು, ಉಪ್ಪು, ಜೀರಿಗೆ, ಹೆಚ್ಚಿದ ಹಸಿಮೆಣಸಿನಕಾಯಿ ಮತ್ತು ಕೊತ್ತಂಬರಿ ಹಾಕಿ.
2) ನಂತರ ಮಿಶ್ರಣಕ್ಕೆ ನೀರನ್ನು ಸೇರಿಸಿ ದೋಸೆಯ ಹದಕ್ಕೆ ಸಿದ್ಧ ಮಾಡಿಕೊಳ್ಳಿ.
3) ಈಗ ಮಿಶ್ರಣವನ್ನು ಅರ್ಧ ಗಂಟೆ ಪಕ್ಕಕ್ಕೆ ಇರಿಸಿ
4) ನಂತರ ಮಿಶ್ರಣಕ್ಕೆ ಈರುಳ್ಳಿ ಸೇರಿಸಿ ಚೆನ್ನಾಗಿ ಬೆರೆಸಿ
5) ತವಾ ಚೆನ್ನಾಗಿ ಬಿಸಿ ಮಾಡಿಕೊಂಡು ಸ್ವಲ್ಪ ಎಣ್ಣೆ ಹಾಕಿ ನಂತರ ಹಿಟ್ಟನ್ನು ದೋಸೆಯ ಹದಕ್ಕೆ ಹಾಕಿ ಬೇಯಿಸಿದರೆ ರುಚಿಯಾದ ದಿಢೀರ್ ಜೋಳದ ದೋಸೆ ರೆಸಿಪಿ ಸವಿಯಲು ಸಿದ್ಧ.