ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
* ಮೈದಾ ಹಿಟ್ಟು
* ಮೊಸರು
* ಆರೆಂಜ್ ಫುಡ್ ಕಲರ್
* ಸಕ್ಕರೆ
* ನೀರು
* ಕೇಸರಿ ದಳಗಳು
* ರಾಬ್ರಿ ಮತ್ತು ಪಿಸ್ತಾ
ಮಾಡುವ ವಿಧಾನ:
* ಮೊದಲು ದೊಡ್ಡ ಪಾತ್ರೆಯಲ್ಲಿ ರಿಫೈಂಡ್ ಫ್ಲೋರ್, ಆರೆಂಜ್ ಫುಡ್ ಕಲರ್ ಮತ್ತು ಸಾಕಷ್ಟು ನೀರನ್ನು ತೆಗೆದುಕೊಂಡು ನೀರು ಹಾಕಿ ಮೃದುವಾದ ಹಿಟ್ಟನ್ನು ಸಿದ್ಧಪಡಿಸಿಕೊಳ್ಳಿ. ನಂತರ ಇದನ್ನು 8 ರಿಂದ 9 ಗಂಟೆಗಳ ಕಾಲ ಇರಿಸಿ.
* ನೀರಿನಲ್ಲಿ ಸಕ್ಕರೆ ಮತ್ತು ಕೇಸರಿ ದಳವನ್ನು ಕರಗಿಸಿಕೊಂಡು ಸಕ್ಕರೆ ದ್ರಾವಣವನ್ನು ಸಿದ್ಧಮಾಡಿ. ಆದಷ್ಟು ಉರಿ ಕಡಿಮೆಯಲ್ಲಿರಲಿ ನಂತರ ಉರಿಯನ್ನು ಜಾಸ್ತಿಮಾಡುತ್ತಾ ದ್ರಾವಣವನ್ನು ದಪ್ಪಗಾಗಿಸಿಕೊಳ್ಳಿ.
* ಈಗ ಜಲೇಬಿ ಬಟ್ಟೆಗೆ ಸ್ವಲ್ಪ ಹಿಟ್ಟನ್ನು ಹಾಕಿಕೊಳ್ಳಿ, ಮೂಲೆಗಳನ್ನು ಮಡಚಿ ಗಂಟುಕಟ್ಟಿಕೊಳ್ಳಿ.
* ಎಣ್ಣೆಯಲ್ಲಿ ವೃತ್ತಾಕಾರದ ಜಿಲೇಬಿಗಳನ್ನು ಹಾಕಿ, ಇದು ಚಿನ್ನದ ಬಣ್ಣಕ್ಕೆ ಬರುವವರೆಗೆ ಎಣ್ಣೆಯಲ್ಲಿ ಕರಿದುಕೊಳ್ಳಿ.
* ನಂತರ ಅದನ್ನು ಸಕ್ಕರೆ ದ್ರಾವಣದಲ್ಲಿ 2-3 ನಿಮಿಷಗಳ ಕಾಲ ಅದ್ದಿ ತೆಗೆಯಿರಿ. ಸಕ್ಕರೆ ದ್ರಾವಣದಿಂದ ಅದನ್ನು ಹೊರತೆಗೆದು ತಟ್ಟೆಯಲ್ಲಿರಿಸಿ.
ನಂತರ ರಾಬ್ರಿ ಅಥವಾ ಪಿಸ್ತಾದಿಂದ ಜಿಲೇಬಿಯನ್ನು ಅಲಂಕರಿಸಿದರೆ ಸವಿಯಲು ಸಿದ್ಧ.