RECIPE| ಕಾಂಚಿಪುರಮ್ ಇಡ್ಲಿ ರುಚಿ ಹೇಗಿರತ್ತೆ ಗೊತ್ತಾ? ಇಲ್ಲಾಂದ್ರೆ ಟ್ರೈ ಮಾಡಿ ಸವಿದು ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕಾಂಚಿಪುರಮ್‌ ಸೀರೆ ಬಗ್ಗೆ ಕೇಳಿರ್ತೀರಿ ಆದ್ರೆ ಕಾಂಚಿಪುರಮ್‌ ಇಡ್ಲಿ ಬಗ್ಗೆ ಕೇಳಿದ್ದೀರಾ? ಇಲ್ಲಾಂದ್ರೆ ಈಗಲೇ ಮನೆಯಲ್ಲಿ ಟ್ರೈ ಮಾಡಿ ಸವಿದು ನೋಡಿ.

ಬೇಕಾಗುವ ಸಾಮಾಗ್ರಿಗಳು:

*ಉದ್ದಿನ ಬೇಳೆ
*ಅಕ್ಕಿ
*ಚನ್ನಾ ದಾಲ್
*ಮೊಸರು
*ಗೇರುಬೀಜ
*ಹಸಿಮೆಣಸು
*ತೆಂಗಿನ ತುರಿ
*ಶುಂಠಿ
*ಪೆಪ್ಪರ್ ಪೌಡರ್
*ಉಪ್ಪು
*ಕರಿಬೇವಿನೆಲೆ
*ಎಣ್ಣೆ
*ತುಪ್ಪ

ಮಾಡುವ ವಿಧಾನ:

* ಮೊದಲು ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಚೆನ್ನಾಗಿ ತೊಳೆದುಕೊಂಡು 4 ಗಂಟೆಗಳ ಕಾಲ ನೆನೆಸಿಡಿ.
* ಈಗ ಚನ್ನಾ ದಾಲ್ ಅನ್ನು ಪ್ರತ್ಯೇಕವಾಗಿ ನೆನೆಸಿಡಿ. * ಈಗ ಉದ್ದಿನ ಬೇಳೆ ಮತ್ತು ಅಕ್ಕಿಯನ್ನು ರುಬ್ಬಿಕೊಳ್ಳಿ. * ನಂತರ 5 ರಿಂದ 6 ಗಂಟೆಗಳ ಕಾಲ ನೆನೆಯಲು ಇಡಿ.
* ಮೊಸರು, ಗೇರುಬೀಜ, ಹಸಿಮೆಣಸು, ತೆಂಗಿನ ತುರಿ, ಶುಂಠಿ,ಪೆಪ್ಪರ್ ಪೌಡರ್, ಕರಿಬೇವಿನೆಲೆ, ತುಪ್ಪ, ಉಪ್ಪು ಮತ್ತು ನೆನೆಸಿದ ಚನ್ನಾ ದಾಲ್ ಅನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿಕೊಳ್ಳಿ.
* ಈಗ ಇಡ್ಲಿ ತಟ್ಟೆಗೆ ಹಿಟ್ಟನ್ನು ಹಾಕಿ ಮತ್ತು 10-12 ನಿಮಿಷಗಳ ಕಾಲ ಬೇಯಲು ಇಡಿ.

ಈಗ ಕಾಂಚಿಪುರಮ್ ಇಡ್ಲಿ ರೆಸಿಪಿ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!