ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಪಾಕ್ ಪಂದ್ಯ ಎಂದರೆ ಕ್ರೀಡಾಭಿಮಾನಿಗಳಿಗೆ ಹಬ್ಬದಂತೆ, ಮ್ಯಾಚ್ ನೋಡಲು ಟಿಕೆಟ್ ಕೊಳ್ಳಲು ಅಭಿಮಾನಿಗಳು ಕಾಯ್ತಾ ಇರ‍್ತಾರೆ. ಆದರೆ ಈ ಬಾರಿ ಭಾರತ-ಪಾಕ್ ಮ್ಯಾಚ್ ನೋಡೋಕೆ ಅಭಿಮಾನಿಗಳು ಆಸಕ್ತಿ ತೋರಿಸ್ತಿಲ್ಲ.
ವಿಶ್ವಕಪ್‌ನಲ್ಲಿ ಪಾಕ್ ಹಾಗೂ ಭಾರತ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯ ವೀಕ್ಷಿಸೋಕೆ ಜನರು ಆಸಕ್ತಿ ತೋರುತ್ತಿಲ್ಲ. ಎಲ್ಲದಕ್ಕೂ ಮಳೆರಾಯನೇ ಕಾರಣ, ವರದಿ ಪ್ರಕಾರ 15 ಸಾವಿರಕ್ಕೂ ಹೆಚ್ಚು ಟಿಕೆಟ್‌ಗಳು ಈಗಲೂ ಖಾಲಿಯಿವೆ, ಪಂದ್ಯ ಆರಂಭವಾದರೂ ಕ್ರೀಡಾಂಗಣ ಖಾಲಿ ಖಾಲಿ ಕಾಣಿಸಲಿದೆ. 35 ಸಾವಿರ ಅಭಿಮಾನಿಗಳು ಕೂರುವಷ್ಟು ಆಸನದ ವ್ಯವಸ್ಥೆಯಿದೆ. ಆದರೆ 20 ಸಾವಿರ ಪ್ರೇಕ್ಷಕರು ಮಾತ್ರ ಟಿಕೆಟ್ ಖರೀದಿಸಿದ್ದಾರೆ ಎನ್ನಲಾಗಿದೆ.