ಬೇಸಿಗೆಯಲ್ಲಿ ಮನೆಯಲ್ಲೇ ಮಾಡಿ ನೋಡಿ ರುಚಿಯಾದ ಮ್ಯಾಂಗೋ ಐಸ್‌ಕ್ರೀಮ್

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಸಿಗೆಯಲ್ಲಿ ತಂಪಾಗಿರುವಂತಹ ಆಹಾರ ಪದಾರ್ಥಗಳನ್ನ ಸವಿಯಬೇಕು ಅಂತ ಆಸೆಯಾಗುವುದು ಸಾಮಾನ್ಯ. ಆದರೆ ಪದೇ ಪದೇ ಹೊರಗಡೆ ಹೋಗಿ ತಿನ್ನುವುದು ಕಷ್ಟ. ಹಾಗಾಗಿ ಮನೆಯಲ್ಲೇ ಯಾವ ರೀತಿ ಮ್ಯಾಂಗೋ ಐಸ್‌ಕ್ರೀಂ ಮಾಡಬಹುದು ಎಂದು ಇಲ್ಲಿ ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು:

ನಾರಿಲ್ಲದ ಮಾವಿನ ಹಣ್ಣು
1/2 ಕಪ್ ಸಕ್ಕರೆ
1/2 ಕಪ್ ಮಂದವಾದ ಹಾಲು
2 ಕಪ್ ಹಾಲು (ಕುದಿಸಿ ಆರಿಸಿದ್ದು)
ನಿಂಬೆರಸ

ಮಾಡುವುದು ಹೇಗೆ ?

* ಮಾವಿನ ಹಣ್ಣಿಗೆ ಸಕ್ಕರೆ ಹಾಕಿ ನುಣ್ಣನೆ ರುಬ್ಬಿಕೊಳ್ಳಿ.
* ಒಂದು ದೊಡ್ಡ ಬೌಲ್‌ನಲ್ಲಿ ಹಾಕಿ, ಅದಕ್ಕೆ ತಣ್ಣನೆಯ ಹಾಲು, ಮಂದವಾದ, ಹಾಲು, ನಿಂಬೆರಸ ಹಾಕಿ ಮಿಕ್ಸ್ ಮಾಡಿ. ನಂತರ ಅದನ್ನು ಒಂದು ಬೌಲ್‌ಗೆ ಹಾಕಿ ಅದನ್ನು ಅಲ್ಯುಮಿನಿಯಂ ಹಾಳೆಯಿಂದ ಮುಚ್ಚಿ 6 ಗಂಟೆ ಫ್ರೀಝರ್‌ನಲ್ಲಿಡಿ.
* ನಂತರ ಫ್ರಿಡ್ಜ್‌ನಿಂದ ಹೊರತೆಗೆದು 5 ನಿಮಿಷ ಬಿಟ್ಟು ಮತ್ತೆ ಬ್ಲೆಂಡರ್‌ನಲ್ಲಿ ಹಾಕಿ ಬ್ಲೆಂಡ್‌ ಮಾಡಿ.
* ನಂತರ ಅದೇ ಪಾತ್ರೆಗೆ ಹಾಕಿ, ಗಾಳಿಯಾಡಂತೆ ಅಲ್ಯುಮಿನಿಯಂ ಹಾಳೆಯಿಂದ ಮುಚ್ಚಿ ಮತ್ತೆ 10 ಗಂಟೆ ಇಟ್ಟರೆ ಐಸ್‌ಕ್ರೀಂ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!