RECIPE| ಗ್ಯಾಸ್ಟ್ರಿಕ್‌ ಸಮಸ್ಯೆ ಇದೆ ಅನ್ನೋರು ಸೇವಿಸಿ ಅವರೆಕಾಳು ಮಸಾಲೆ ಉಪ್ಪಿಟ್ಟು

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಬೇಕಾಗುವ ಸಾಮಾಗ್ರಿಗಳು:

ಅವರೆಕಾಳು
ರವೆ
ಹಸಿಮೆಣಸಿನಕಾಯಿ
ಜೀರಿಗೆ
ಸಾಸಿವೆ
ಈರುಳ್ಳಿ
ಟೊಮ್ಯಾಟೋ
ಹುಣಸೆಹಣ್ಣು
ಹಸಿ ಶುಂಠಿ
ಬೆಲ್ಲ
ಉದ್ದಿನಬೇಳೆ
ಕಡಲೆಬೀಜ/ಶೇಂಗಾ
ಕಡಲಬೇಳೆ
ಅರಿಶಿಣ: ಚಿಟಿಕೆ
ಅಚ್ಚ ಖಾರದ ಪುಡಿ
ಇಂಗು
ಕರಿಬೇವು
ಕೋತಂಬರಿ ಸೊಪ್ಪು
ಎಣ್ಣೆ
ತುಪ್ಪ
ಉಪ್ಪು

ಮಾಡುವ ವಿಧಾನ:

* ಮೊದಲು ಮಾರುಕಟ್ಟೆಯಿಂದ ತಂದಿರುವ ಅವರೆಕಾಳನ್ನು ಎರಡರಿಂದ ಮೂರು ಬಾರಿ ನೀರಿನಲ್ಲಿ ತೊಳೆದುಕೊಂಡು, ನಂತರ ಒಂದು ಕಪ್​ನಷ್ಟು ನೀರು ಹಾಕಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ.

* ಈಗ ಒಂದು ಪಾತ್ರೆಯಲ್ಲಿ ರವೆಯನ್ನು ಹುರಿದುಕೊಳ್ಳಿ. ಹುರಿದಿರುವ ರವೆಯನ್ನು ಮತ್ತೊಂದು ಪಾತ್ರೆಗೆ ಹಾಕಿ ತೆಗೆದಿಡಿ. ಈಗ ಇದೇ ಪಾತ್ರೆಗೆ ಎಣ್ಣೆ ಹಾಕಿ. ಎಣ್ಣೆ ಬಿಸಿ ಆಗ್ತಿದ್ದಂತೆ ತುಪ್ಪ ಹಾಕಿ.

*ಎಣ್ಣೆ ಮತ್ತು ತುಪ್ಪ ಬಿಸಿಯಾಗ್ತಿದ್ದಂತೆ ಜೀರಿಗೆ, ಸಾಸಿವೆ, ಕಡಲೆಬೀಜ ಮತ್ತು ಉದ್ದಿನಬೇಳೆ ಸೇರಿಸಿ ಚೆನ್ನಾಗಿ ಫ್ರೈ ಮಾಡಿಕೊಳ್ಳಿ.

* ಈಗ ಈರುಳ್ಳಿ, ಟೊಮ್ಯಾಟೋ, ಹಸಿಮೆಣಸಿನಕಾಯಿ ಹಾಗೂ ಕರೀಬೇವು ಸೇರಿಸಿ ಚೆನ್ನಾಗಿ ಮಿಕ್ಸ್​ ಮಾಡಿಕೊಳ್ಳಿ. ತದನಂತರ ಅಚ್ಚ ಖಾರದ ಪುಡಿ, ಹುಣಸೆಹಣ್ಣಿನ ರಸ, ಬೆಲ್ಲ ಹಾಕಿ ಎರಡು ನಿಮಿಷ ಬೇಯಿಸಿಕೊಳ್ಳಿ. ಈ ವೇಳೆ ಚಿಟಿಕೆ ಇಂಗು, ಅರಿಶಿನ ಹಾಕಿಕೊಳ್ಳಿ. ತದನಂತರ ರುಚಿಗೆ ತಕ್ಕಷ್ಟು ಉಪ್ಪು ಸೇರಿಸಿ.

* ಈಗ ಬೇಯಿಸಿಕೊಂಡಿರುವ ಅವರೆಕಾಳು ಮಿಕ್ಸ್​ ಮಾಡಿಕೊಂಡು ಮುಚ್ಚಳ ಮುಚ್ಚಿ ಎರಡರಿಂದ ಮೂರು ನಿಮಿಷ ಬೇಯಿಸಿಕೊಳ್ಳಿ.

* ಅವರೆಕಾಳು ಬೇಯುತ್ತಿದ್ದಂತೆ ಎರಡು ಕಪ್​ನಷ್ಟು ನೀರು ಹಾಕಿ, ಎರಡು ನಿಮಿಷ ಕುದಿಸಿ.

*ನೀರು ಕುದಿಯುತ್ತಿದ್ದಂತೆ ಹುರಿದಿಟ್ಟುಕೊಂಡಿರುವ ರವೆಯನ್ನು ಸೇರಿಸಿ, ಚೆನ್ನಾಗಿ ಮಿಕ್ಸ್ ಮಾಡಿದ ನಂತರ ಮುಚ್ಚಳ ಮುಚ್ಚಿ ನಾಲ್ಕರಿಂದ ಐದು ನಿಮಿಷ ಬೇಯಿಸಿ. ನಂತರ ಕೋತಂಬರಿ ಸೊಪ್ಪು ಉದುರಿಸಿದ್ರೆ ಮಸಾಲಾ ಅವರೆಕಾಳು ಉಪ್ಪಿಟ್ಟು ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!