ಹೊಸದಿಗಂತ ಡಿಜಿಟಲ್ ಡೆಸ್ಕ್:
ಬೇಕಾಗುವ ಸಾಮಾಗ್ರಿಗಳು:
ಕಾರ್ನ್ ಹಿಟ್ಟು
ಕಡಲೆಹಿಟ್ಟು
ಮೆಂತೆ ಸೊಪ್ಪು
ಅಜ್ವೈನ್ ಬೀಜಗಳು
ಅರಶಿನ
ಉಪ್ಪು
ಜೀರಿಗೆ ಹುಡಿ
ಹಸಿಮೆಣಸು
ಎಣ್ಣೆ
ಮಾಡುವ ವಿಧಾನ:
* ಮೊದಲು ಕಾರ್ನ್ ಹಿಟ್ಟು ಮತ್ತು ಕಡಲೆ ಹಿಟ್ಟನ್ನು ಸೇರಿಸಿ ನೀರು ಹಾಕಿಕೊಂಡು ನಾದಿಕೊಳ್ಳಿ.
* ನಾದಿದ ಹಿಟ್ಟಿಗೆ ಮೆಂತೆ ಸೊಪ್ಪು, ಅರಿಶಿನ, ಅಜ್ವೈನ್ ಮತ್ತು ಉಪ್ಪು ಹಾಕಿಕೊಂಡು ಮತ್ತೊಮ್ಮೆ ನಾದಿಕೊಳ್ಳಿ.
* ಪ್ಯಾನ್‌ನಲ್ಲಿ ಒಂದು ಸ್ಪೂನ್‌ನಷ್ಟು ಎಣ್ಣೆ ಬಿಸಿ ಮಾಡಿಕೊಂಡು ಅದಕ್ಕೆ ಹಸಿಮೆಣಸನ್ನು ಹಾಕಿ.
* ಈಗ ಅದಕ್ಕೆ ಜೀರಿಗೆ ಹುಡಿಯನ್ನು ಸೇರಿಸಿ.
* ಹಸಿಮೆಣಸು ಜೀರಿಗೆ ಮಿಶ್ರಣವನ್ನು ಹಿಟ್ಟಿಗೆ ಸೇರಿಸಿಕೊಳ್ಳಿ.
* ಈಗ ಹಿಟ್ಟಿನಿಂದ ಸಣ್ಣ ಉಂಡೆಗಳನ್ನು ಮಾಡಿಕೊಳ್ಳಿ ನಂತರ ಪರೋಟಾ ಆಕಾರದಲ್ಲಿ ಅವುಗಳನ್ನು ಲಟ್ಟಿಸಿಕೊಳ್ಳಿ.
* ಒಲೆ ಮೇಲೆ ಪ್ಯಾನ್ ಇಟ್ಟು ಬಿಸಿ ಮಾಡಿಕೊಳ್ಳಿ. ಅದಕ್ಕೆ ಎಣ್ಣೆ ಅಥವಾ ತುಪ್ಪ ಹಾಕದೇ ಪರೋಟಾವನ್ನು ಬೇಯಿಸಿಕೊಳ್ಳಿ. ಬಿಸಿ ಬಿಸಿಯಾದ ಮೆಂತೆ ಪರೋಟ ಸವಿಯಲು ಸಿದ್ಧ.