ಹೊಸದಿಗಂತ ಡಿಜಿಟಲ್ ಡೆಸ್ಕ್ :
ಸ್ವೀಟ್ ಪ್ರಿಯರು ಹಲವಾರು ರೀತಿಯ ಬರ್ಫಿಯನ್ನು ತಿಂದಿರುತ್ತೀರಿ. ಆದರೆ ಹಾಲಿನ ಪುಡಿಯ ಬರ್ಫಿಯನ್ನು ಎಂದಾದರೂ ತಿಂದಿದ್ದೀರಾ ? ಇಲ್ಲ ಎಂದಾದರೆ ಈಗಲೆ ಹಾಲಿನ ಪುಡಿ ಬರ್ಫಿಯನ್ನು ಮನೆಯಲ್ಲೊಮ್ಮೆ ಮಾಡಿ ತಿಂದು ನೋಡಿ ಆಗ ನೀವೇ ನಿಜವಾದ ರುಚಿಯನ್ನು ಸವಿಯುತ್ತೀರಿ.
ಬೇಕಾಗುವ ಪದಾರ್ಥಗಳು:
ತುಪ್ಪ
ಹಾಲು
ಹಾಲಿನ ಪುಡಿ
ಸಕ್ಕರೆ
ಏಲಕ್ಕಿ ಪುಡಿ
ಬಾದಾಮಿ
ಪಿಸ್ತಾ (ಕತ್ತರಿಸಿದ)
ಮಾಡುವ ವಿಧಾನ:
ಮೊದಲು ದೊಡ್ಡ ಪಾತ್ರೆಯಲ್ಲಿ ತುಪ್ಪ ಮತ್ತು ಹಾಲು ಹಾಕಿ, ನಂತರ ಕಪ್ ಹಾಲಿನ ಪುಡಿ, ಸಕ್ಕರೆಯನ್ನು ಸೇರಿಸಿ. ಎಲ್ಲವನ್ನೂ ಚೆನ್ನಾಗಿ ಬೆರೆಸಿ ಸ್ವಲ್ಪ ಸಮಯದ ಬಳಿಕ ಹಿಟ್ಟು ಪ್ಯಾನ್ನಿಂದ ಬೇರ್ಪಡುತ್ತದೆ. ಈಗ ಟೀಸ್ಪೂನ್ ಏಲಕ್ಕಿ ಪುಡಿ ಸೇರಿಸಿ ಚೆನ್ನಾಗಿ ಮಿಕ್ಸ್ ಮಾಡಿ. ತಯಾರಾದ ಹಿಟ್ಟನ್ನು ಬೇಕಿಂಗ್ ಪೇಪರ್ ಹಾಕಿದ ಪ್ಲೇಟ್ಗೆ ವರ್ಗಾಯಿಸಿ ಚೆನ್ನಾಗಿ ಹೊಂದಿಸಿ. ಅದಕ್ಕೆ ಕತ್ತರಿಸಿದ ಬಾದಾಮಿ ಮತ್ತು ಪಿಸ್ತಾಗಳಿಂದ ಅಲಂಕರಿಸಿ.