ತೂಕ ಇಳಿಸೋದ್‌ ಹೇಗಪ್ಪಾ ಅನ್ನೋರಿಗೆ ಬೆಸ್ಟ್ ರೆಸಿಪಿ ಓಟ್ಸ್ ಖಿಚಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ತೂಕ ಇಳಿಸುವುದು ಹೇಗೆ ಎಂದು ಚಿಂತಿಸುವವರಿಗಾಗಿ ಇಲ್ಲಿದೆ ಬೆಸ್ಟ್‌ ರೆಸಿಪಿ ಅದುವೇ ಓಟ್ಸ್‌ ಖಿಚಡಿ. ಓಟ್ಸ್‌ ಖಿಚಡಿ ಮಾಡಲು ಬೇಕಾಗುವ ಸಾಮಾಗ್ರಿಗಳು ಮತ್ತು ಮಾಡುವ ವಿಧಾನ ಹೇಗೆ ಎಂದು ಇಲ್ಲಿ ತಿಳಿಯಿರಿ.

ಬೇಕಾಗುವ ಸಾಮಗ್ರಿಗಳು:

ಓಟ್ಸ್
ಹೆಸರು ಬೇಳೆ
ಆಲೀವ್‌ ಎಣ್ಣೆ
ಬೆಳ್ಳುಳ್ಳಿ ಪೇಸ್ಟ್
ಹಸಿ ಮೆಣಸಿನಕಾಯಿ ಪೇಸ್ಟ್ ಅಥವಾ ಹಸಿ ಮೆಣಸಿನಕಾಯಿ
ಅರಿಶಿಣ ಪುಡಿ
ಉಪ್ಪು
ಡ್ರೈ ಫ್ರೂಟ್ಸ್

ಮಾಡುವ ವಿಧಾನ:

* ಪ್ರೆಶರ್‌ ಕುಕ್ಕರ್ ಬಿಸಿ ಮಾಡಿ ಅದಕ್ಕೆ ಎಣ್ಣೆ ಹಾಕಿ, ಎಣ್ಣೆ ಬಿಸಿಯಾದಾಗ ಹಸಿ ಮೆಣಸಿನಕಾಯಿ ಪೇಸ್ಟ್ ಹಾಗೂ ಬೆಳ್ಳುಳ್ಳಿ ಪೇಸ್ಟ್ ಹಾಕಿ ಫ್ರೈ ಮಾಡಿ.
* ಈಗ ಓಟ್ಸ್ ಹಾಗೂ ತೊಳೆದ ಹೆಸರು ಬೇಳೆ ಹಾಕಿ 2 ನಿಮಿಷ ಹುರಿಯಿರಿ.
* ಇದಕ್ಕೆ 4 ಕಪ್‌ ನೀರು ಹಾಕಿ ರುಚಿಗೆ ತಕ್ಕಷ್ಟು ಉಪ್ಪು, ಅರಿಶಿಣ ಪುಡಿ ಸೇರಿಸಿ.
* ಎರಡು ವಿಶಲ್‌ ಆದರೆ ಓಟ್ಸ್ ಕಿಚಡಿ ಸಿದ್ಧ.
*ಇದಕ್ಕೆ ನೀವು ಡ್ರೈ ಫ್ರೂಟ್ಸ್ ಅಥವಾ ಬೆರ್ರಿ ಫ್ರೂಟ್ಸ್ ಹಾಕಿ ಸವಿದರೆ ಮತ್ತಷ್ಟು ರುಚಿಯಾದ ಮತ್ತು ಆರೋಗ್ಯಕರವಾರ ಓಟ್ಸ್‌ ಖಿಚಡಿ ಸವಿಯಲು ಸಿದ್ಧ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!